ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

ganja
Published on

ಹುಬ್ಬಳ್ಳಿ: ಶಾಲಿಮಾರ್-ವಾಸ್ಕೋ ಅಮರಾವತಿ ಎಕ್ಸ್‌ಪ್ರೆಸ್ ರೈಲಿನ ಜನರಲ್ ಬೋಗಿಯಲ್ಲಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಬಂಧಿಸಿ, ಅವರಿಂದ 4 ಲಕ್ಷ ರೂ. ಮೌಲ್ಯದ 4 ಕೆಜಿ 493 ಗ್ರಾಂ ಗಾಂಜಾ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಓಡಿಶಾ ರಾಜ್ಯದ ಅರುಣಕುಮಾರ ಮಹಾಪಾತ್ರ(38), ಶಾಲಿಮಾರ್‌ನ ಭಾಗೀರಥಿ ಮಾಂಜಿ(33) ಎಂಬುವರನ್ನು ಬಂಧಿಸಲಾಗಿದೆ. ಬ್ಯಾಗ್‌ನಲ್ಲಿ ಎಂಟು ಬಂಡಲ್‌ನಲ್ಲಿದ್ದ ಹೂವು ಮತ್ತು ಎಲೆಗಳಿಂದ ಕೂಡಿದ 4 ಕೆಜಿ 493 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net