ಗರಗ ಠಾಣೆ ಪೊಲೀಸರಿಂದ ಇಬ್ಬರ ಬಂಧನ

29 Dwd 5 (Shankrayya Mathapati)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಕೋಟೂರ ಗ್ರಾಮ ಪಂಚಾಯಿತಿ ಸದಸ್ಯ ಶಂಕ್ರಯ್ಯ ಪಂಚಯ್ಯ ಮಠಪತಿ ಹತ್ಯೆ ಪ್ರಕರಣ ಸಂಬ0ಧ ಗರಗ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕೋಟೂರ ಗ್ರಾಮದ ದೀಪಕ ಕಮ್ಮಾರ, ನಟರಾಜ ಹಡಕರ ಬಂಧಿತ ಆರೋಪಿಗಳು.

ಗ್ರಾಮದ ಮನೆಯ ಮುಂದೆ ಕುಳಿತಿದ್ದ ಶಂಕ್ರಯ್ಯನನ್ನು ಏ. 29ರಂದು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಮೃತನ ಪತ್ನಿ ನೀಡಿದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಇನ್‌ಸ್ಪೆಕ್ಟರ್ ಸಮೀರ ಮುಲ್ಲಾ ನೇತೃತ್ವದ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

2023ರ ಏ. 19ರಂದು ಕೋಟೂರ ಗ್ರಾ.ಪಂ. ಉಪಾಧ್ಯಕ್ಷನಾಗಿದ್ದ ಪ್ರವೀಣ ಕಮ್ಮಾರ ಎಂಬಾತನ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಶಂಕ್ರಯ್ಯ ಮಠಪತಿ ಕೂಡ ಆರೋಪಿಯಾಗಿ ಜೈಲುಶಿಕ್ಷೆ ಅನುಭವಿಸಿದ್ದರು. ಕೆಲ ತಿಂಗಳ ಹಿಂದೆ ಬಿಡುಗಡೆಯಾಗಿದ್ದರು. ಪ್ರವೀಣನ ಸಹೋದರ ದೀಪಕ ಹಳೇ ದ್ವೇಷ ಇಟ್ಟುಕೊಂಡು ಶಂಕ್ರಯ್ಯನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಗರಗ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net