ಇಬ್ಬರು ಸಾಹಸಿಗಳಿಗೆ ಜೀವನ ರಕ್ಷಾ ಪದಕ ಪುರಸ್ಕಾರ

6RAVIG10-Web
ಗೋಕಾಕ ತಾಲೂಕಿನ ವಡೇರಹಟ್ಟಿಯ ಸಿದ್ದಪ್ಪ ಹೊಸಟ್ಟಿ ಹಾಗೂ ಶಿವಾನಂದ ಹೊಸಟ್ಟಿಗೆ ಜೀವನ ರಕ್ಷಾ ಪದಕವನ್ನು ಆಯುಕ್ತ ಕೆ.ತ್ಯಾಗರಾಜನ್ ವಿತರಿಸಿದರು. ಡಿಸಿಪಿಗಳಾದ ವಿಕ್ರಮ ಆಮಟೆ ಹಾಗೂ ಚಂದ್ರಶೇಖರ ನೀಲಗಾರ ಇದ್ದರು.
Published on

ಬೆಳಗಾವಿ: ಹಳ್ಳದಲ್ಲಿ ಬಿದ್ದು ಪ್ರಾಣಾಪಾಯದಲ್ಲಿದ್ದ ಬಾಲಕನನ್ನು ಸಮಯ ಪ್ರಜ್ಞೆಯಿಂದ ರಕ್ಷಿಸಿ, ಧೈರ್ಯ ಹಾಗೂ ಸಾಹಸ ಮೆರೆದಿದ್ದ ಗೋಕಾಕ ತಾಲೂಕಿನ ವಡೇರಹಟ್ಟಿಯ ಸಿದ್ದಪ್ಪ ಕೆಂಪಣ್ಣ ಹೊಸಟ್ಟಿ ಹಾಗೂ ಶಿವಾನಂದ ದಶರಥ ಹೊಸಟ್ಟಿ ಅವರಿಗೆ ಕೇಂದ್ರ ಗೃಹ ಮಂತ್ರಾಲಯವು ‘ಜೀವನ ರಕ್ಷಾ ಪದಕ’ ಹಾಗೂ ತಲಾ 1ಲಕ್ಷ ರೂ.ಬಹುಮಾನ ನೀಡಿ, ಗೌರವಿಸಿದೆ.

ನಗರದ ಆಯುಕ್ತಾಲಯ ಕಚೇರಿಯಲ್ಲಿ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಅವರು ಪುರಸ್ಕೃತರಿಗೆ ಪದಕ ಹಾಗೂ ಪ್ರಮಾಣ
ಪತ್ರವನ್ನು ಶುಕ್ರವಾರ ವಿತರಿಸಿದರು. ಡಿಸಿಪಿಗಳಾದ ವಿಕ್ರಮ ಆಮಟೆ ಹಾಗೂ ಚಂದ್ರಶೇಖರ ನೀಲಗಾರ ಇದ್ದರು. 2018ರ ಮೇ 8ರಂದು ಗೋಕಾಕ ತಾಲೂಕಿನ ವಡೇರಹಟ್ಟಿ ಗ್ರಾಮದ ಇಂದ್ರವೇಣಿ ಹಳ್ಳದಲ್ಲಿ ಆಕಸ್ಮಿಕವಾಗಿ ಬಿದ್ದು ತೇಲಿ ಹೋಗುತ್ತಿದ್ದ ಹುಡುಗನ ಆಕ್ರಂದನ, ಚೀರಾಟ ಕೇಳಿ ಸ್ಥಳಕ್ಕೆ ಧಾವಿಸಿದರು. ನೀರಿನ ರಭಸಕ್ಕೆ ಭಯಪಡದೆ, ಹಳ್ಳಕ್ಕೆ ಹಾರಿ ನೀರಿನಲ್ಲಿ ಮುಳುಗುತ್ತಿರುವ ಬಾಲಕನನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದರು. ಯುವಕರ ಸಾಹಸ ಮೆಚ್ಚಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 2018ರ ನ. 14ರಂದು ಹೊಯ್ಸಳ ಮತ್ತು ಕೆಳದಿ ಚನ್ನಮ್ಮ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net