ಎರಡು ಎಕರೆ ಬಾಳೆ ಫಸಲು ನಾಶ

5KMD-1
ದೇವರಹಳ್ಳಿ ಗ್ರಾಮದಲ್ಲಿ ಬಾಳೆ ಫಸಲು ಮುರಿದು ಬಿದ್ದಿರುವುದು.
Published on

ಕೆ.ಎಂ.ದೊಡ್ಡಿ: ಬಿರುಗಾಳಿಯಿಂದಾಗಿ ದೇವರಹಳ್ಳಿ ಗ್ರಾಮದಲ್ಲಿ ಎರಡು ಎಕರೆ ಬಾಳೆ ಫಸಲು ನಾಶವಾಗಿದೆ.

ಗ್ರಾಮದ ಶಿವಮ್ಮ, ಪುಟ್ಟರಾಜು, ರಮೇಶ್ ಅವರಿಗೆ ಸೇರಿದ ಬಾಳೆ ಫಸಲು ಇದಾಗಿದ್ದು, ಬರಗಾಲದಲ್ಲೂ ಬಾಳೆ ಫಸಲನ್ನು ಪಂಪ್ ಸೆಟ್ ನೀರಿನ ಆಶ್ರಯದಲ್ಲಿ ಬೆಳೆಯಲಾಗಿತ್ತು. ಆದರೆ ಬಿರುಗಾಳಿಗೆ ಸಿಲುಕಿ ಬಾಳೆ ಬೆಳೆ ಮುರಿದು ಬಿದ್ದಿದೆ.

ಸಮೀಪದ ಯಲಾದಹಳ್ಳಿ ಗ್ರಾಮದಲ್ಲಿ ಮನೆಯ ಶೀಟ್‌ಗಳು ಗಾಳಿಗೆ ಹಾರಿ ಹೋಗಿವೆ. ಗ್ರಾಮದ ಅಂಗನವಾಡಿ ಸಹಾಯಕಿ ಗೌರಮ್ಮ ಅವರಿಗೆ ಸೇರಿದ ಮನೆ ಇದಾಗಿದೆ.

ಸಿಡಿಲಿಗೆ ತೆಂಗಿನ ತೋಟ ಭಸ್ಮ: ಸಮೀಪದ ಮುಟ್ಟನಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ ತೆಂಗಿನ ತೋಟ ಭಸ್ಮವಾಗಿದೆ. ಗ್ರಾಮದ ಚಿಕ್ಕಹೈದೇಗೌಡ ಅವರು 1.15 ಎಕರೆ ಪ್ರದೇಶದಲ್ಲಿ ಹಾಕಿದ್ದ ತೆಂಗು ಭಸ್ಮವಾಗಿದೆ. ಬರಗಾಲದಲ್ಲಿ ಪಂಪಸೆಟ್ ಆಶ್ರಯಿಸಿ ತೆಂಗಿನ ತೋಟವನ್ನು ಉಳಿಸಿಕೊಂಡಿದ್ದು ಸಿಡಿಲಿಗೆ ಆಹುತಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net