

ರಾಣೆಬೆನ್ನೂರ: ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿಯ ವಿದ್ಯಾನಗರದ ಹರೀಶ ನೇತಾಜಪ್ಪ ಮಾಳಗಿ (27) ಹಾಗೂ ದೇವೇಂದ್ರ ದಿನಾನಾಥ ಚೌದ್ರಿ (24) ಬಂಧಿತ ಆರೋಪಿತರು.
ಇವರು ನಗರದ ಮೇಡ್ಲೇರಿ ರಸ್ತೆಯ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಸಮಯದಲ್ಲಿ ಶಹರ ಠಾಣೆ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.