

ಕಾರ್ಕಳ: ಕಳೆದ ಏ.4 ರಂದು ಮುಂಡ್ಕೂರು ಗ್ರಾಮದಲ್ಲಿ ರಮೇಶ್ (67) ಎಂಬುವರು ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟ ಬಗ್ಗೆ ಕಾರ್ಕಳ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿ ತನಿಖೆಯಲ್ಲಿದ್ದು, ಸದ್ಯ ಪ್ರಕರಣ ತಿರುವು ಪಡೆದುಕೊಂಡಿದೆ.
ಸಚ್ಚರಿಪೇಟೆಯ ನ್ಯೂ ಸಾಯಿ ಕೃಪಾ ಹೋಟೆಲ್ ವಾಲೀಕ ಸುರೇಶ್ ಎಂಬಾತನಿಂದ ಆಗಿರುವ ಅವವಾನಕ್ಕೆ ನೊಂದು ಹೊಟೇಲ್ ಕಾರ್ಮಿಕ ರಮೇಶ್ ಆತ್ಮಹತ್ಯೆ ವಾಡಿಕೊಂಡಿರುವುದಾಗಿ ರಮೇಶ್ ಅವರ ಮಗ ಶರತ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದು, ಕಾರ್ಕಳ ಗ್ರಾವಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಮೇಶ್ ಅವರು ಸುರೇಶ ಅವರ ಹೋಟೆಲ್‌ನಲ್ಲಿ ಕೆಲಸ ವಾಡಿಕೊಂಡಿದ್ದು, ತಾನು ದುಡಿದ ಸಂಬಳ ನೀಡುವಂತೆ ಕೇಳಿದಾಗ ವಾಲೀಕ ಸುರೇಶ್ ಸಂಬಳ ನೀಡದೇ ಹೋಟೆಲ್ ಗಿರಾಕಿಗಳ ಎದುರಲ್ಲೇ ಅವಾಚ್ಯವಾಗಿ ನಿಂದಿಸಿ ಹಲ್ಲೆಗೈದ ಪ್ರಕರಣದಿಂದ ಅವವಾನಕ್ಕೊಳಗಾಗಿ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಈ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಪೊಲೀಸರು ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.