

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಷ್ಠಿತ ದ್ವಿಚಕ್ರ ವಾಹನ ಉತ್ಪಾದಕ ಟಿವಿಎಸ್ ಮೋಟಾರ್ ಕಂಪನಿಯ ಟಿವಿಎಸ್ ಜುಪಿಟರ್ 110 ಸಿಸಿಯ ನೂತನ ಮÁದರಿಯ ವಾಹನವನ್ನು ನಗರದ ಮರಾಠಾ ಕಾಲನಿಯ ಸರೂರ ಮೋಟರ್ಸ್ನಲ್ಲಿ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಗುರುವಾರ ಮಾರುಕಟ್ಟೆಗೆ ಬಿಡುಗಡೆ ಮÁಡಿದರು.
ಆಧುನಿಕ ತಂತ್ರಜ್ಞಾನದ ಜುಪಿಟರ್ 110 ಸಿಸಿ ವಾಹನ 6 ಬಣ್ಣಗಳಲ್ಲಿ ಲಭ್ಯ ಇದೆ. ಮುಂಭಾಗದಲ್ಲಿ ಇಂಧನ ಭರಿಸುವ, ಉದ್ದ ಹಾಗೂ ಆರಾಮದಾಯಕ ಸೀಟು ಹೊಂದಿದೆ. ಸೀಟಿನಡಿ 2 ಹೆಲ್ಮೆಟ್ ಇಡಬಹುದಾದ ಸ್ಥಳಾವಕಾಶ ಹೊಂದಿದೆ. ಇದರ ಎಕ್ಸ್ ಶೋರೂಂ ದರ 74,400 ರೂಪಾಯಿಯಿಂದ ಪ್ರಾರಂಭವಾಗುತ್ತದೆ ಎಂದು ಸರೂರ ಮೋಟಾರ್ಸ್ ಮಾಲೀಕ ಸುನಿಲ್ ಸರೂರ ಮಾಹಿತಿ ನೀಡಿದರು.
ಡಾ. ಸತೀಶ ಇರಕಲ್, ಡಾ. ಆನಂದ ಪಾಟೀಲ, ಶೋರೂಮ್ ವ್ಯವಸ್ಥಾಪಕ ಮುದಸ್ಸರ್ ಸೈಯದ್, ಇತರರಿದ್ದರು.