

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಅವಳಿ ನಗರದ ಬೀದಿ ಬದಿ ವ್ಯಾಪಾರಿಗಳನ್ನು ಪ್ರತಿನಿಧಿಸುವ ಪಟ್ಟಣ ಮಾರಾಟ ಸಮಿತಿ (ಟಿವಿಸಿ-ಟೌನ್ ವೆಂಡಿಂಗ್ ಕಮಿಟಿ)ಯ ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧೋರಣೆಯನ್ನು ಖಂಡಿಸಿ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಸಿದರು.
8 ತಿಂಗಳ ವಿಳಂಬದ ಬಳಿಕ ಪಾಲಿಕೆ ಆಯುಕ್ತರ ಕಚೇರಿ ಸಭಾಭವನದಲ್ಲಿ ಗುರುವಾರ ಸಭೆ ಕರೆಯಲಾಗಿತ್ತು. ಸಮಿತಿ ಸದಸ್ಯ ಜಾವೇದ್ ಟಿನ್ವಾಲೆ ಮಾತನಾಡಿ, ಧಾರವಾಡದ ಕಾಮತ್ ಹೋಟೆಲ್ ವೃತ್ತದ ಬಳಿ ಪುನರ್ವಸತಿ ಕಲ್ಪಿಸದೇ ಬೀದಿ ಬದಿ ವ್ಯಾಪಾರಿಗಳು ತೆರವುಗೊಳಿಸಿದ ಪ್ರಕರಣದಲ್ಲಿ ಹಿಂದಿನ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ನ್ಯಾಯಾಲಯದಲ್ಲಿ ಕ್ಷಮಾಪಣೆ ಕೋರಿದ್ದಾರೆ. ಆದರೆ, ಇದಕ್ಕೆ ಸಂಬಂಧಪಟ್ಟಂತೆ ವಲಯ ಕಚೇರಿ ನಂ. 2ರ ಅಂದಿನ ಸಹಾಯಕ ಆಯುಕ್ತ ಎಂ.ಬಿ. ಸಬರದ ವಿರುದ್ಧ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ವಿಷಯ ಪ್ರಸ್ತಾಪಿಸಿ ಘೊಷಣೆ ಕೂಗುತ್ತ ಪ್ರತಿಭಟನೆಗೆ ಇಳಿದರು. ಆದಂಸಾಬ್ ಮುಲ್ಲಾನವರ, ಇಸ್ಮಾಯಿಲ್ ಬಿಳೇಪಸಾರ, ಇನ್ನಿತರ ಸದಸ್ಯರು ಸಾಥ್ ನೀಡಿದರು.
ಈ ಹಂತದಲ್ಲಿ ಸಭೆಗೆ ಆಗಮಿಸಿದ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಇದು ಸಭೆ ನಡೆಸುವ ಪದ್ಧತಿ ಅಲ್ಲ. ಸಭೆ ಮುಂದುವರಿಸ ಬೇಕಾದರೆ ತಕ್ಷಣ ಪ್ರತಿಭಟನೆ ಬಿಟ್ಟು ನಿಮ್ಮ ಆಸನದಲ್ಲಿ ಹೋಗಿ ಕುಳಿತುಕೊಳ್ಳಿ ಎಂದು ಹೇಳಿದರು. ಬಳಿಕ ಟಿವಿಸಿ ಸದಸ್ಯರು ಪ್ರತಿಭಟನೆ ಕೈ ಬಿಟ್ಟು ಆಸನದಲ್ಲಿ ಕುಳಿತರು.
ಮಾರ್ಕಿಂಗ್ ಮಾಡುತ್ತೇವೆ
ಹು-ಧಾ ಅವಳಿ ನಗರದಲ್ಲಿ 41 ವ್ಯಾಪಾರಿ ವಲಯಗಳನ್ನು ಗುರುತಿಸಲಾಗಿದೆ. ಪಾಲಿಕೆಯ ವಲಯ ಕಚೇರಿ ಅಧಿಕಾರಿಗಳು ತಕ್ಷಣ ನಿರ್ದಿಷ್ಟ ವ್ಯಾಪಾರಿ ವಲಯಗಳಲ್ಲಿ ಮಾರ್ಕಿಂಗ್ ಮಾಡಿ ಫಲಕ ಅಳವಡಿಸಬೇಕು. ಕೆಲವೊಂದು ವ್ಯಾಪಾರಿ ವಲಯಗಳ ಸ್ಥಳ ನಿಗದಿ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕಿದೆ. ರ್ಪಾಂಗ್ಗೆ ಸ್ಥಳ ಬಿಡಬೇಕಾಗುತ್ತದೆ. ಈ ಕುರಿತು ಮತ್ತೊಮ್ಮೆ ಸಭೆ ಕರೆದು ಇತ್ಯರ್ಥ ಪಡಿಸೋಣ ಎಂದು ಡಾ. ಉಳ್ಳಾಗಡ್ಡಿ ಹೇಳಿದರು.
ಸಮಿತಿಯ ನಾಮ ನಿರ್ದೇಶಿತ ಸದಸ್ಯ ಪ್ರೇಮನಾಥ ಚಿಕ್ಕತುಂಬಳ ಮಾತನಾಡಿ, ಸ್ಮಾರ್ಟ್ ಸಿಟಿ ಅನುದಾನದಲ್ಲಿ ನಿರ್ವಿುಸಿದ ಜನತಾ ಬಜಾರ್ ವಾಣಿಜ್ಯ ಸಂಕೀರ್ಣವನ್ನು ವ್ಯಾಪಾರಕ್ಕೆ ಮುಕ್ತಗೊಳಿಸಿಲ್ಲ. ಇಲ್ಲಿ ಮೊದಲು ವ್ಯಾಪಾರ ನಡೆಸುತ್ತಿದ್ದ 177 ಚಿಕ್ಕ ಪುಟ್ಟ ವ್ಯಾಪಾರಿಗಳಿಗೆ ನೂತನ ಸಂಕೀರ್ಣದ ಸುತ್ತಮುತ್ತಲಿನ ಖಾಲಿ ಜಾಗದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಗೋಕುಲ ರಸ್ತೆ ನಾಲಾ ಬಳಿ ಇರುವ ಪಾಲಿಕೆ ಒಡೆತನದ ಜಾಗವನ್ನು ಬೀದಿ ಬದಿ ವ್ಯಾಪಾರಸ್ಥರ ಅನುಕೂಲಕ್ಕಾಗಿ ಭವನ ನಿರ್ವಣಕ್ಕೆ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಹೊಟೇಲ್ನವರ ಒತ್ತಡಕ್ಕೆ ಮಣಿದು ಇತ್ತೀಚೆಗೆ ಕಿಮ್್ಸ ಬಳಿ (ಅಮೃತ್ ಟಾಕೀಸ್ ರಸ್ತೆ) ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ್ದಾರೆ. ಇಲ್ಲಿ ಡಬ್ಬಿ ಅಂಗಡಿಗಳು ಇದ್ದವು ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ. ಅದರೆ, ಅಲ್ಲಿ ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡಲಾಗಿತ್ತಿತ್ತು. ತೆರವುಗೊಳಿಸುವ ಪೂರ್ವ ಟಿವಿಸಿ ಗಮನಕ್ಕೆ ತಂದಿಲ್ಲ ಎಂದು ಇಸ್ಮಾಯಿಲ್ ಬಿಳೇಪಸಾರ ದೂರಿದರು.
ಡಿಸೆಂಬರ್ನಲ್ಲಿ ಟಿವಿಸಿ ಚುನಾಯಿತ ಸದಸ್ಯರ ಅವಧಿ ಮುಗಿಯಲಿದೆ. ಕಳೆದ ನಾಲ್ಕೂವರೆ ವರ್ಷದಲ್ಲಿ 7 ಬಾರಿ ಸಭೆ ನಡೆದಿದೆ. ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಬೇಕೆಂಬ ನಿಯಮವನ್ನು ಪಾಲಿಕೆ ಪಾಲಿಸಿಲ್ಲ. ವಲಯ ಕಚೇರಿ ಸಹಾಯಕ ಆಯುಕ್ತರು ಟಿವಿಸಿ ಸದಸ್ಯರಿಗೆ ಮರ್ಯಾದೆ ಕೊಡುವುದಿಲ್ಲ. ಹುಬ್ಬಳ್ಳಿ ಬ್ರಾಡ್ ವೇ ರಸ್ತೆಯಲ್ಲಿ ಎರಡು ಕಡೆ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಸದಸ್ಯರು ಹೇಳಿದರು.
ಪಾಲಿಕೆ ಉಪ ಆಯುಕ್ತ (ಕಂದಾಯ) ಆನಂದ ಕಲ್ಲೋಳಿಕರ, ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ, ಅಧೀಕ್ಷಕ ಇಂಜಿನೀಯರ್ ಇ. ತಿಮ್ಮಪ್ಪ, ಸಮಿತಿ ಸದಸ್ಯರಾದ ನಿರ್ಮಲಾ ಹಂಜಗಿ, ಪ್ರಕಾಶ ಹಳ್ಯಾಳ, ಕವಿತಾ ದೊಡವಾಡ, ಇತರರು ಇದ್ದರು.