

ವಿಜಯಪುರ : ನಗರ ಹೊರ ವಲಯದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದಲ್ಲಿ ಪದವಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗಾಗಿ ಅ. 24 ರಂದು ಬೆಳಗ್ಗೆ 11 ಕ್ಕೆ ಟೆಲಿವಿಷನ್ ಸ್ಟುಡಿಯೋ ಭೇಟಿ ಮತ್ತು ಟಿವಿ ಆಂಕರಿಂಗ್ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತರಬೇತಿ ಕಾರ್ಯಕ್ರಮ ಉಚಿತವಾಗಿದ್ದು, ಯಾವುದೇ ಶುಲ್ಕವಿಲ್ಲ. ಜಿಲ್ಲೆಯ ಪದವಿ ಕಾಲೇಜುಗಳಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ, ಬಿಬಿಎಂ ಮುಂತಾದ ಕೋರ್ಸ್ಗಳಲ್ಲಿ ಒಂದರಿಂದ ಆರನೇ ಸೆಮಿಸ್ಟರ್ವರೆಗೆ ಓದುತ್ತಿರುವ ಅಥವಾ ಈ ವರ್ಷ 6 ನೇ ಸೆಮಿಸ್ಟರ್ ಪರೀೆಗೆ ಹಾಜರಾದ ವಿದ್ಯಾರ್ಥಿನಿಯರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.
ಆಸಕ್ತರು ವಿದ್ಯಾರ್ಥಿನಿಯರು ಮಾಹಿತಿಗಾಗಿ ಸಂದೀಪ್ ಮೊ. 9844681398 ಕ್ಕೆ ಸಂಪರ್ಕಿಸುವಂತೆ ಅಲ್ಲದೆ, ನೇರವಾಗಿ ಅ. 24 ರಂದು ಬೆಳಗ್ಗೆ 10.45 ರೊಳಗೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗಕ್ಕೆ ಭೇಟಿ ನೀಡುವಂತೆ ವಿವಿಯು ಪ್ರಕಟಣೆಯಲ್ಲಿ ತಿಳಿಸಿದೆ.