ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತಿಯೊಬ್ಬರ ಶ್ರಮ ಅಗತ್ಯ

5tvk01 okkaliga guruvandane,
Published on

ತುರುವೇಕೆರೆ: ನಾಡಪ್ರಭು ಕೆಂಪೇಗೌಡರು ಒಕ್ಕಲಿಗರಾದರೂ ಕೇವಲ ತಮ್ಮ ಸಮುದಾಯಕ್ಕೆ ಬೆಂಗಳೂರನ್ನು ಕಟ್ಟಲಿಲ್ಲ, ಎಲ್ಲ ವರ್ಗದವರೂ ರಾಜಧಾನಿಯಲ್ಲಿ ನೆಲೆಸಿದ್ದಾರೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಕೆ.ಹಿರಣ್ಣಯ್ಯ ಬಯಲು ರಂಗಮಂದಿರದ ಆವರಣದಲ್ಲಿ ತಾಲೂಕು ಒಕ್ಕಲಿಗ ನೌಕರರ ಕ್ಷೇವಾಭಿವೃದ್ಧಿ ಸಂದಿಂದ ಶನಿವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗು ಪ್ರತಿಭಾ ಪುರಸ್ಕಾರ ಸವಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು. ಒಬ್ಬ ವ್ಯಕ್ತಿ ಅಥವಾ ಒಂದು ವರ್ಗದಿಂದ ದೇಶದ ಏಳಿಗೆ ಸಾಧ್ಯವಿಲ್ಲ. ಎಲ್ಲರ ಶ್ರಮದ ದುಡಿತ ಅಗತ್ಯವಿದೆ. ತಂದೆ ತಾಯಿ ಸೇವೆಗಿಂತ ಮಿಗಿಲಾದದ್ದು ಮತ್ತೊಂದಿಲ್ಲ. ನಿಮ್ಮೊಳಗಿನ ಅರಿವು ಅರಿಯದ ಹೊರತು ಹೊರಗಿನ ಗುರುವನ್ನು ಅರಿಯಲಾಗದು ಎಂದರು.

ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ವಾತನಾಡಿ, ಸವಾಜಮುಖಿ ಚಿಂತನೆಗಳ ಮೂಲಕ ವಿಶ್ವವಾನವನಾಗಿ ಬೆಳೆಯಬೇಕಿದೆ. ವೇದ ಓದಿದರೆ ದೊಡ್ಡವರಾಗುವುದಿಲ್ಲ. ಜನರ ನೋವು ನಲಿವುಗಳಿಗೆ ಸ್ಪಂದಿಸುವವನೇ ಜ್ಞಾನವಂತನಾಗುತ್ತಾನೆ ಎಂದರು. ಸಾರ್ವಜನಿಕರಿಗೆ ಅವರೆ, ಹಲಸಿನಕಾಯಿ ಸಾಂಬಾರು, ಕಾಳುಗಳಕೂಟು, ಪಾಯಸ, ಬೂಂದಿ, ಅನ್ನಸಾಂಬಾರು ಅಪ್ಪಳದ ಸವಿಯೂಟ ಏರ್ಪಡಿಸಲಾಗಿತ್ತು.

ತಾಲೂಕು ಒಕ್ಕಲಿಗ ನೌಕರರ ಕ್ಷೇವಾಭಿವೃದ್ಧಿ ಸಂದ ಅಧ್ಯಕ್ಷ ಡಾ.ನವೀನ್, ಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ವಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಎಂ.ಡಿ.ಲಕ್ಷ್ಮೀನಾರಾಯಣ, ಎಚ್.ಬಿ.ನಂಜೇಗೌಡ, ತಾಲೂಕು ಪಂಚಾಯಿತಿ ವಾಜಿ ಅಧ್ಯಕ್ಷ ರಮೇಶ್‌ಗೌಡ, ತುಮುಲ್ ಜಿಲ್ಲಾ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ, ಬೆಸ್ಕಾಂ ನಿರ್ದೇಶಕ ರಾಜೇಶ್‌ಗೌಡ, ತಾಲೂಕು ಒಕ್ಕಲಿಗರ ಸಂದ ಅಧ್ಯಕ್ಷ ಪಿ.ಎಚ್.ಧನಪಾಲ್, ಬಿಆರ್‌ಪಿ ಶಿವಶಂಕರ್, ಕಸಾಪ ತಾಲೂಕು ಅಧ್ಯಕ್ಷ ನಂ.ರಾಜು ಇದ್ದರು.

ಶಾಸಕರಿಂದ ಬೆಳ್ಳಿ ಕಿರೀಟಧಾರಣೆ: ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಶಾಸಕ ಮಸಾಲಾ ಜಯರಾಮ್ ಬೆಳ್ಳಿ ಕಿರೀಟಧಾರಣೆ ಮಾಡಿ ಪುಷ್ಪಾಭಿಷೇಕ ವಾಡಿದರು. ಈ ವೇಳೆ ಅಪಾರ ಸಂಖ್ಯೆಯ ಭಕ್ತಾಧಿಗಳು ಬೃಹತ್ ಪುಷ್ಪರಾಶಿಯನ್ನು ಸ್ವಾಮೀಜಿ ಪಾದಕ್ಕೆ ಅರ್ಪಿಸಿದರು. ಎಲ್ಲ ಸಮುದಾಯದ ಮುಖಂಡರು, ಹಾಲು ಉತ್ಪಾದಕರ ಸಹಕಾರ ಸಂ, ವಿವಿಧ ಸಂಸ್ಥೆಗಳ ಮುಖಂಡರಿಂದ ಸ್ವಾಮೀಜಿಗೆ ಹೂವಾಲೆ ಹಾಕುವ ಮೂಲಕ ಗುರುವಂದನೆ ಸಲ್ಲಿಸಲಾಯಿತು.

ಬೆಳ್ಳಿ ರಥದಲ್ಲಿ ಸ್ವಾಮೀಜಿ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಬೆಳ್ಳಿರಥದಲ್ಲಿ ವಿವಿಧ ಜಾನಪದ ಕಲಾ ಪ್ರಕಾರದ ತಂಡಗಳೊಂದಿಗೆ, ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಹಾಗೂ ವಾದ್ಯಗೋಷ್ಠಿಯೊಂದಿಗೆ ವೇದಿಕೆವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ನಾಡಗೀತೆ ಹಾಗೂ ಶಿಕ್ಷಕ ರಮೇಶ್ ತಂಡದಿಂದ ರೈತ ಗೀತೆ ಹಾಡಲಾಯಿತು. ಮಠದ ವಿದ್ಯಾರ್ಥಿಗಳು ವೇದೋಷ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net