

ವಿಜಯಪುರ : ಜೀವನದಲ್ಲಿ ತಿರುವುಗಳು ಯಾವಾಗಲಾದರೂ ಬರಬಹುದು. ಮಹಿಪತಿ ದಾಸರಿಸಿಗೆ ನಂಗಾಶಾಹಿ ಸೂಫಿಯ ಮೂಲಕವಾಗಿ ಅವರು ಆಧ್ಯಾತ್ಮದತ್ತ ಹೊರಳಿದರು ಎಂದು ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಹೇಳಿದರು.
ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಹಿಪತಿದಾಸರ ಜೀವನ, ಸಾಹಿತ್ಯ ಹಾಗೂ ಸಮಕಾಲೀನ ಇತಿಹಾಸ' ವಿಷಯ ಮೇಲೆ ಅವರು ಉಪನ್ಯಾಸ ನೀಡಿದರು.
ಮಲ್ಲಿಕ್ ಕಾಫೂರ್, ಮಹಮ್ಮದ್ ಬಿನ್ ತುಲಕ್ ದಾಳಿಯ ನಂತರ ದಣದ ತುಂಗಭದ್ರಾ ನದಿಯ ಕೆಳಗಿನ ಭಾಗದಲ್ಲಿ ವಿಜಯನಗರ ಸಾಮ್ರಾಜ್ಯ, ನದಿಯ ಮೇಲ್ಬಾಗ ಬಹುಮನಿ ಸಾಮ್ರಾಜ್ಯಗಳು ಉದಯಿಸಿದವು. ಬಹುಮನಿ ಸಾಮ್ರಾಜ್ಯದಲ್ಲಿ ವಿಜಯಪುರ ಒಂದು ಆಡಳಿತ ಪರದೇಶವಾಗಿತ್ತು. ಯೂಸುಫ್ ಆ ಆಡಳಿತದ ಮುಖ್ಯಸ್ಥನಾಗಿದ್ದನು. ಅವನೇ ಮುಂದೇ ಆದಿಲ್ ಶಾಹಿ ಸಾಮ್ರಾಜ್ಯ ಸ್ಥಾಪಿಸುತ್ತಾನೆ. ಈ ಆದಿಲ್ ಶಾಹಿ ಮನೆತನದ ಎರಡನೇ ಅಲಿ ಆದಿಲ್ ಶಾಹಿ ಕಾಲದಲ್ಲಿ ಮಹಿಪತಿದಾಸರು ಹಣಕಾಸು ಇಲಾಖೆಯಲ್ಲಿದ್ದರು. ಅವರಿಗೆ ನಂಗಾಶಾಹಿ ಸೂಫಿಯ ಮೂಲಕ ಪರಿವರ್ತನೆಗೊಂಡು ಭಾಸ್ಕರ ಸ್ವಾಮಿಗಳ ಶಿಷ್ಯರಾಗುತ್ತಾರೆ. ಮಹಿಪತಿದಾಸರು ಯೋಗ ಸಾಧನ ಮೂಲಕ ದಿವ್ಯತೆಯನ್ನು ಪಡೆದರು. ಅದನ್ನು ಅವರ ಅನೇಕ ಕೀರ್ತನೆಗಳಲ್ಲಿ ಶಬ್ದದಲ್ಲಿ ಹಿಡಿದಿಟ್ಟಿದ್ದಾರೆ ಎಂದು ಮಹಿಪತಿದಾಸರ ಚರಿತ್ರೆ ಬಗ್ಗೆ ಮಾಹಿತಿ ನೀಡಿದರು.
ಉಪನ್ಯಾಸಕ ನಾರಾಯಣ ಬಾಬಾನಗರ ಮಾತನಾಡಿ, ಮಹಿಪತಿದಾಸರ ಕೀರ್ತನೆಗಳು ಈವರೆಗೂ ಸಂಪೂರ್ಣವಾಗಿ ಮುದ್ರಣವಾಗಿಲ್ಲ. ಅವುಗಳ ಮುದ್ರಣ ಕಾರ್ಯ ನಡೆಯಬೇಕು ಎಂದರು.
ಅಧ್ಯತೆ ವಹಿಸಿದ್ದ ಹರ್ಷವರ್ಧನ ಸರಾಫ ಮಾತನಾಡಿ, ದಾಸರ, ಶರಣ, ಹಳೆಗನ್ನಡ ಕವಿಗಳ ಕುರಿತು ಸಾಹಿತ್ಯಕ ಕಾರ್ಯಕ್ರಮ ಆಗಾಗ ನಡೆಯಬೇಕೆಂದು ಸಲಹೆ ನೀಡಿದರು.
ಪ್ರಿಯಾ ಹರಿದಾಸ ಪ್ರಾರ್ಥಿಸಿದರು. ಆನಂದ ಗೋಡ್ಸೆ ಸ್ವಾಗತಿಸಿ ಪರಿಚತಿಸಿದರು. ರಾಹುಲ್ ಮರಳಿ ನಿರೂಪಿಸಿದರು. ಶ್ರೀರಂಗ ಕುಲಕರ್ಣಿ ವಂದಿಸಿದರು. ವಿವೇಕ ಕುಲಕರ್ಣಿ, ಶ್ರೀರಂಗ ಪುರಾಣಿಕ, ಅನಿಲ ಬಳ್ಳುಂಡಗಿ, ಸುಕಾಂತ ಕುಲಕರ್ಣಿ, ವರಣು ಸೋಲಾಪುರ, ಮಯೂರ ತಿಳಗೂಳಕರ, ಆನಂದ ಜೋಶಿ, ಶಶಿಧರ ಶಿರಾಳಶೆಟ್ಟಿ, ರವೀಂದ್ರ ಹಲ್ಯಾಳ ಮತ್ತಿತರರಿದ್ದರು.
ವಿಜಯಪುರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ಹಮ್ಮಿಕೊಂಡ ಮಹಿಪತಿದಾಸರ ಜೀವನ, ಸಾಹಿತ್ಯ ಹಾಗೂ ಸಮಕಾಲೀನ ಇತಿಹಾಸದ ಕುರಿತು ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಉಪನ್ಯಾಸ ನೀಡಿದರು. ನಾರಾಯಣ ಬಾಬಾನಗರ ಇದ್ದಾರೆ.