ಸೆ.3 ರಂದು ಟರ್ಫ ಹಾಕಿ ಕ್ರೀಡಾಂಗಣ ಲೋಕಾರ್ಪಣೆ

2 (3)
Published on

ಗದಗ: ಹಾಕಿ ಕ್ರೀಡೆಯಲ್ಲಿ ಗದಗ ಜಿಲ್ಲೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕಲ್ಕತ್ತಾ, ಮುಂಬೈ ಬಿಟ್ಟರೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಹಾಕಿ ಕ್ರೀಡಾ ಪಟುಗಳನ್ನು ನೀಡಿರುವ ಹೆಮ್ಮೆ ನಮ್ಮ ಗದಗ ಜಿಲ್ಲೆಯದಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.

ಬೆಟಗೇರಿಯ ಗಾಂಧೀ ನಗರದಲ್ಲಿ ನಿರ್ಮಾಣವಾದಂತಹ ಸುಸಜ್ಜಿತ ಹಾಕಿ ಕ್ರೀಡಾಂಗಣದಲ್ಲಿ ಸೋಮವಾರ ಜರುಗಿದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಗದಗ-ಬೆಟಗೇರಿ ನಗರದ ಹೃದಯ ಭಾಗದಲ್ಲಿ ಅಂದಾಜು 9 ಕೋಟಿ ರೂ. ವೆಚ್ಚÀದಲ್ಲಿ ನಿರ್ಮಾಣವಾದಂತಹ ಸುಸಜ್ಜಿತ ಟರ್ಫ ಹಾಕಿ ಕ್ರೀಡಾಂಗಣವು ಬರುವ ಸೆಪ್ಟೆಂಬರ 3 ರಂದು ಮುಂಜಾನೆ 9 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪನವರು ಸುಸಜ್ಜಿತ ಹಾಕಿ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವರಾದ ನಾಗೇಂದ್ರ ಅವರು ಆಗಮಿಸಲಿರುವರು ಎಂದರು.

ಅದೇ ದಿನ ಮುಂಜಾನೆ 10 ಗಂಟೆಗೆ ಹಾಕಿ ಕ್ರೀಡಾಂಗಣದಲ್ಲಿ ಆರು ತಂಡಗಳು ಎ ಮತ್ತು ಬಿ ಗುಂಪುಗಳಾಗಿ ವಿಂಗಡಿಸಿ ಹಾಕಿ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ. ಮೊದಲ ಗುಂಪಿನಲ್ಲಿ ಕರ್ನಾಟಕ ರಾಜ್ಯ ಪೋಲಿಸ್, ಹುಬ್ಬಳ್ಳಿಯ ಹಾಕಿ ಅಕಾಡೆಮಿ, ಬಿ.ವಾಯ್.ಎ.ಎಸ್ ತಂಡಗಳು ಹಾಗೂ ಮತ್ತೋಂದು ಗುಂಪಿನಲ್ಲಿ ಗದಗ- XI , ಎಸ್.ಡಬ್ಲೂ.ಆರ್.ಹುಬ್ಬಳ್ಳಿ ಹಾಗೂ ಬಿ.ವಾಯ್.ಎ.ಎಸ್. ಬೆಂಗಳೂರು ತಂಡಗಳು ಸೆಣಸಾಡಲಿವೆ ಎಂದರು.

ಸುಸಜ್ಜಿತ ಈ ಹಾಕಿ ಕ್ರೀಡಾಂಗಣವು ಉತ್ತರ ಕರ್ನಾಟಕ ಭಾಗದಲ್ಲಿಯೇ ಪ್ರಥಮವಾಗಿದ್ದು ಪ್ರತಿಭಾವಂತ ಮಕ್ಕಳಿಗೆ ಉತ್ತಮ ವೇದಿಕೆ ಆಗುವ ಮೂಲಕ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಮುನ್ನಡೆಯಲು ಈ ಕ್ರೀಡಾಂಗಣ ಸಹಕಾರಿಯಾಗಲಿದೆ. ಜಿಲ್ಲಾ ಮಟ್ಟದಲ್ಲಿ ಸುಸಜ್ಜಿತ ಟರ್ಫ ಹಾಕಿ ಕ್ರೀಡಾಂಗಣ ಹೊಂದಿರುವುದು ಗದಗ ಜಿಲ್ಲೆ ಮಾತ್ರ ಎಂಬುದು ಹೆಮ್ಮೆಯ ಸಂಗತಿಯಾಗಿದೆ.

ಈ ಹಾಕಿ ಕ್ರಿಡಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಯುವ ಕ್ರೀಡಾಪಟುಗಳಿಗೆ ತರಬೇತಿ ನೀಡಿ ಕ್ರೀಡಾ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆದಂತಹ ಕ್ರೀಡಾಪಟುಗಳಿಗೆ ಹಾಗೂ ತರಬೇತಿದಾರರಿಗೆ ಸನ್ಮಾನಿಸಲಾಗುವದು. ಇವರುಗಳ ಜೊತೆಗೆ ಸುಸಜ್ಜಿತ ಟರ್ಫ ಹಾಕಿ ಕ್ರೀಡಾಂಗಣ ನಿರ್ಮಿಸಲು ಅಗತ್ಯದ ಸಲಹೇ ಸೂಚನೆ ಹಾಗೂ ಸಹಕಾರಿ ನೀಡಿದ 5 ಜನರನ್ನು ಸಹ ಗೌರವಿಸಿ ಸನ್ಮಾನಿಸಲಾಗುವದು. ಅದೇ ದಿನ ಕಳಸಾಪುರ ರಸ್ತೆಯಲ್ಲಿನ ಒಳಾಂಗಣ ಕ್ರೀಡಾಂಗಣದ ಹಿಂದುಗಡೆ ನಿರ್ಮಾಣಗೊಂಡಿರುವಂತಹ ಹೊಸ ಈಜು ಕೊಳ ಕೂಡ ಮಧ್ಯಾಹ್ನ 12 ಗಂಟೆಗೆ ಸಚಿವರಾದ ನಾಗೇಂದ್ರ ಅವರು ಲೋಕಾರ್ಪಣೆಗೊಳಿಸುವರು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಇದೇ ಸಂದರ್ಭದಲ್ಲಿ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೊಗೇರಿ, ಲೋಕಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಮೇಶ ಪಾಟೀಲ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಗಂಗಾಧರ ಶಿರೋಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು, ಹಾಕಿ ತರಬೇತಿದಾರರು, ಕ್ರೀಡಾಪಟುಗಳು ಉಪಸ್ಥಿತರಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net