

ಸೋಮವಾರಪೇಟೆ:
ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನ ಸಮೀಪ ಹಲವು ವರ್ಷಗಳಿಂದ ಹಿಂದೆ ನಿರ್ಮಾಣಗೊಂಡಿರುವ ಟರ್ಫ್ ಮೈದಾನ ಕಾಮಗಾರಿಯನ್ನು ಶಾಸಕ ಡಾ.ಮಂತರ್‌ಗೌಡ ವೀಕ್ಷಿಸಿದರು.
ಇನ್ನೂ ಲೋಕಾರ್ಪಣೆಯಾಗದೆ ಹಲವು ಕಾರಣಗಳಿಂದ ಕಾಮಗಾರಿಯೂ ಪೂರ್ಣಗೊಳ್ಳದೆ ಇರುವುದನ್ನು ಮನಗಂಡ ಶಾಸಕರು ಖುದ್ದಾಗಿ ಪರಿಶೀಲಿಸಿ ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಮೈದಾನದ ಹಲವೆಡೆ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ ಶಾಸಕರು,ಲೋಕಾಯುಕ್ತ ತನಿಖೆ ನಂತರ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ದೇಶಕ್ಕೆ ಅನೇಕ ಹಾಕಿ ಆಟಗಾರರನ್ನು ಕೊಡುಗೆಯಾಗಿ ನೀಡಿರುವ ಸೋಮವಾರಪೇಟೆ ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ಆಟದ ಮೈದಾನ ಇಲ್ಲದಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಶಾಸಕರು,ಕೂಡಲೇ ಅಗತ್ಯವಿರುವ ಕ್ರಮ ಕೈಗೊಂಡು ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.ಮೈದಾನದ ಸುತ್ತ ಮುತ್ತ ಇರುವ ಜಾಗದಲ್ಲಿ ವಾಲಿಬಾಲ್ ಆಟದ ಮೈದಾನ,ಸ್ಕೇಟಿಂಗ್ ತರಬೇತಿ ಕೇಂದ್ರ ನಿರ್ಮಿಸಲು ಉದ್ದೇಶಿಸಿರುವುದಾಗಿ ಶಾಸಕ ಡಾ.ಮಂತರ್ ಗೌಡ ತಿಳಿಸಿಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ಲೋಕೇಶ್,ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಬಿ.ಬಿ.ಸತೀಶ್,ಟರ್ಫ್ ನಿರ್ಮಾಣ ಅಭಿವೃದ್ದಿ ಸಮಿತಿ ಸದಸ್ಯರು ಇದ್ದರು.