ವೇಗ ಪಡೆದುಕೊಂಡ ನಮ್ಮ ಮೆಟ್ರೋ ಕಾಮಗಾರಿ; 721 ಮೀ. ಸುರಂಗ ಕೊರೆದು ಹೊರಬಂದ 'ವಮಿಕ' ಯಂತ್ರ

Metro
Published on

ಬೆಂಗಳೂರು: ನಗರದಲ್ಲಿ ನಮ್ಮ ಮೆಟ್ರೋ 'ಪಿಂಕ್​ ಮಾರ್ಗ'ದ ಕಾಮಗಾರಿ ಭರದಿಂದ ಸಾಗಿದೆ. ಲಕ್ಕಸಂದ್ರ ಮೆಟ್ರೋ ನಿಲ್ದಾಣದಿಂದ ಸುರಂಗ ಮಾರ್ಗ ಕೊರೆಯುವ ಕೆಲಸ ಆರಂಭಿಸಿದ್ದ "ವಮಿಕ' ಟಿಬಿಎಂ ಯಂತ್ರ 721 ಮೀ. ಸುರಂಗ ಕೊರೆಯುವುದರೊಂದಿಗೆ ಲ್ಯಾಂಗೊರ್ಡ್​ ಟೌನ್​ ನಿಲ್ದಾಣದಿಂದ ಬುಧವಾರ ಯಶಸ್ವಿಯಾಗಿ ಹೊರ ಬಂದಿದೆ.

ಸುರಂಗ ಕೊರೆಯುವ ಯಂತ್ರವು ಕಳೆದ ಏಪ್ರಿಲ್​ 21ರಂದು ಲಕ್ಕಸಂದ್ರ ನಿಲ್ದಾಣದಿಂದ ಕಾಮಗಾರಿ ಆರಂಭಿಸಿತ್ತು. ಇದರೊಂದಿಗೆ ಹಂತ-2 ರೀಚ್-6ರ 20.991 ಕಿ.ಮೀ ಸುರಂಗ ಮಾರ್ಗದಲ್ಲಿ, ಒಟ್ಟು 17.62 ಕಿ.ಮೀ ಕಾಮಗಾರಿ ಮುಕ್ತಾಯವಾಗಿದೆ. ರೀಚ್​-6 ಸುರಂಗ ಮಾರ್ಗದಲ್ಲಿ ನಿಯೋಜಿಸಲಾದ 9 ಟನಲ್​ ಬೋರಿಂಗ್​ ಮಷಿನ್​ (ಟಿಬಿಎಂ)ಗಳಲ್ಲಿ ಆರು ಟಿಬಿಎಂಗಳು ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸಿದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ವಮಿಕ ಸುರಂಗ ಕೊರೆಯುವ ಯಂತ್ರ ಸೌತ್​ ರಾಂಪ್​ ಮತ್ತು ಡೈರಿ ಸರ್ಕಲ್​ ಸುರಂಗ ನಿಲ್ದಾಣಗಳ ನಡುವೆ 613.2 ಮೀ. ಹಾಗೂ ಡೈರಿ ಸರ್ಕಲ್​ ನಿಲ್ದಾಣದಿಂದ ಲಕ್ಕಸಂದ್ರ ನಿಲ್ದಾಣದ ನಡುವೆ 743.4 ಮೀ. ಸುರಂಗ ಕಾಮಗಾರಿ ಮುಕ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net