ಸುರಂಗ ಯೋಜನೆ ಬಿಡ್ ವಾರ ಮುಂದಕ್ಕೆ

Vijayavani-Featured-Image
Published on

ಬೆಂಗಳೂರು: ಮಹಾನಗರದಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಪಾಲಿಕೆಯು ಸುರಂಗ ರಸ್ತೆ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಹಣಕಾಸು ಹೂಡಿಕೆ ಆಸಕ್ತಿ ವ್ಯಕ್ತಪಡಿಸುವಿಕೆ (ಇಒಐ) ಪ್ರಸ್ತಾಪಕ್ಕೆ ಆಹ್ವಾನಿಸಿರುವ ಬಿಡ್ ಗಡುವನ್ನು ಮತ್ತೆ ವಾರ ಕಾಲ ಮುಂದೂಡಲಾಗಿದೆ.

ಕಳೆದ ಡಿ.7ರಂದು ಟನಲ್ ಯೋಜನೆಗಾಗಿ 19 ಸಾವಿರ ಕೋಟಿ ರೂ. ನಿಧಿ ಸಂಗ್ರಹಿಸಲು ಬಿಡ್ ಕರೆದಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಬಿಡ್ ಮಾರ್ಪಾಡಿಸಿ ಮೊದಲ ಹಂತದ ಕಾಮಗಾರಿಗಾಗಿ ಹಣವನ್ನು ಸಾಲದ ರೂಪದಲ್ಲಿ ಪಡೆಯುವ ಇಂಗಿತ ವ್ಯಕ್ತಪಡಿಸಲಾಗಿತ್ತು. ಇದಕ್ಕೆ ಹೂಡಿಕೆ ಮಾಡುವ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಾರದ ಕಾರಣ ಈಗ ಬಿಡ್ ತೆರೆಯುವ ದಿನಾಂಕವನ್ನು ಜ.8ರವರೆಗೆ ಮುಂದೂಡಲಾಗಿದೆ. ದೊಡ್ಡ ಮೊತ್ತದ ಸಾಲ ನೀಡಬೇಕಿರುವ ಕಾರಣ ವಿವಿಧ ಹಣಕಾಸು ಸಂಸ್ಥೆಗಳಿಂದ ಹೆಚ್ಚಿನ ಸಮಯ ಕೋರಿದ ಹಿನ್ನೆಲೆಯಲ್ಲಿ ಗಡುವು ವಿಸ್ತರಿಸಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net