ತುಂಗಾನದಿಗೆ ಹಾರಿ ಆತ್ಮಹತ್ಯೆ, ವಾರದ ಬಳಿಕ ಯುವಕನ ಮೃತದೇಹ ಪತ್ತೆ

21 smg santhosh
Published on

ಶಿವಮೊಗ್ಗ: ನಗರದ ಹೊಳೆ ಬಸ್ ನಿಲ್ದಾಣದ ಬಳಿಕ ಕಳೆದ ವಾರದ ತುಂಬಿ ಹರಿಯುತ್ತಿದ್ದ ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಮೃತದೇಹ ಹೊಳೆಹೊನ್ನೂರು ಸಮೀಪದ ಕೂಡ್ಲಿ ಬಳಿ ಬುಧವಾರ ರಾತ್ರಿ ಪತ್ತೆಯಾಗಿದೆ.

ಪುರಲೆ ನಿವಾಸಿ ಸಂತೋಷ್ (27) ಮೃತ ಯುವಕ. ಈತ ಜು.14ರಂದು ಬೆಕ್ಕಿನ ಕಲ್ಮಠದ ಬಳಿ ನದಿಗೆ ಹಾರಿದ್ದ. ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಒಂದು ವಾರ ಬೋಟ್ ಮೂಲಕ ನದಿಯಲ್ಲಿ ಹುಡುಕಾಟ ನಡೆಸಿತ್ತು. ನದಿಯಲ್ಲಿ ಕೊಂಚ ನೀರಿನ ಮಟ್ಟ ಇಳಿಮುಖವಾಗಿದ್ದು ಬುಧವಾರ ರಾತ್ರಿ ಕೂಡ್ಲಿ ಬಳಿ ಮೃತದೇಹ ಸಿಕ್ಕಿದೆ.

ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸ್ನೇಹಿತ ಸಂತೋಷ್‌ನ ಪಾಲಕರಿಗೆ ತಿಳಿಸಿದ್ದ. ಅದರಂತೆ ಪಾಲಕರು ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮೃತದೇಹವನ್ನು ಸಂತೋಷ್ ಪಾಲಕರು ಗುರುತಿಸಿದ್ದು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಪೊಲೀಸರು ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net