

ಸಿಂಧನೂರು: ತುಂಗಭದ್ರಾ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಮುಕ್ಕುಂದ ಬಳಿಯ ಗಡ್ಡೆ ಖಾದರಬಾಷಾ ದರ್ಗಾ ಜಲಾವೃತವಾಗಿದೆ.
ತುಂಗಭದ್ರಾ ನದಿಗೆ 1.78 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ತಾಲೂಕಿನ ಸಿಂಗಾಪುರ, ಮುಕ್ಕುಂದ, ಕೆಂಗಲ್, ಉಪ್ಪಳ, ಒಳಬಳ್ಳಾರಿ, ಹೆಡಗಿನಾಳ, ಚಿಂತಮಾನದೊಡ್ಡಿ, ಚಿತ್ರಾಲಿ, ಆಯನೂರು ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದೆ. ಕೆಲವು ಕಡೆ ಎರಡ್ಮೂರು ದಿನಗಳ ಹಿಂದೆ ನಾಟಿ ಮಾಡಿದ್ದ ಭತ್ತ ನೀರಲ್ಲಿ ಮುಳುಗಿದೆ. ನೂರಾರು ಪಂಪ್‌ಸೆಟ್‌ಗಳು ನೀರಲ್ಲಿ ಮುಳುಗಿವೆ. ರೈತರು ಹಾಗೂ ಸಾರ್ವಜನಿಕರು ನದಿಗೆ ಇಳಿಯದಂತೆ ಹಾಗೂ ನದಿ ದಂಡೆ ಹತ್ತಿರ ಹೋಗದಂತೆ ತಹಸೀಲ್ದಾರ್ ಅರುಣ್ ದೇಸಾಯಿ ಮನವಿ ಮಾಡಿದ್ದಾರೆ.