

ರಾಣೆಬೆನ್ನೂರ: ತುಂಗಭದ್ರಾ ನದಿಯಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯೊಬ್ಬ ತಾಲೂಕಿನ ಮಾಕನೂರ ಗ್ರಾಮದ ಬಳಿ ಸ್ವಲ್ಪ ದೂರದಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾನೆ.
ಗ್ರಾಮದ ಮಂಜುನಾಥ ಬಸವರಾಜ ಆನಂದಿ (27) ಮೃತ ವ್ಯಕ್ತಿ.
ಈತ ಜುಲೈ 23ರಂದು ಹಳೆ ಮಾಕನೂರ ಗ್ರಾಮದ ಬಳಿಯು ತುಂಗಭದ್ರಾ ನದಿಯ ಚಕ್‌ಡ್ಯಾಮ್ ಬಳಿ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದ. ಈತನ ಪತ್ತೆಗಾಗಿ ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ತಂಡದವರು ಶೋಧ ನಡೆಸಿದ್ದರು. ಆದರೆ, ಶುಕ್ರವಾರ ಆತನ ಮೃತದೇಹ ಗ್ರಾಮದ ಸ್ವಲ್ಪ ದೂರದಲ್ಲಿ ದೊರೆತಿದೆ. ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.