ತುಂಗಭದ್ರ ನದಿಗೆ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ

tangadi
ಗಂಗಾವತಿ ತಾಲೂಕು ವಕೀಲರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯನ್ನು ಶನಿವಾರ ಸನ್ಮಾನಿಸಲಾಯಿತು. ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಮುಸಾಲಿ, ಪ್ರಧಾನ ಕಾರ್ಯದರ್ಶಿ ಎಚ್.ಎಂ.ಮಂಜುನಾಥ ಇತರರಿದ್ದರು.
Published on

ಗಂಗಾವತಿ: ಕೀಲರ ಸಂಘದ ಮನವಿಯಂತೆ ತಾಲೂಕಿನಲ್ಲಿ ಎಸಿ ಕಚೇರಿ ಆರಂಭಕ್ಕೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕಾಮಗಾರಿಗೆ ಚಾಲನೆ

ನಗರದ ತಾಲೂಕು ವಕೀಲರ ಸಂಘದ ಕಚೇರಿಯಲ್ಲಿ ವಕೀಲರ ಸಂಘಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದರು. ಎಸಿ ಕಚೇರಿಗಾಗಿ ತಾಲೂಕು ವಕೀಲರ ಸಂಘದಿಂದ ನಿರ್ಣಯ ಕೈಗೊಂಡಿರುವ ಮಾಹಿತಿಯಿದ್ದು, ವಕೀಲರ ಮನವಿ ಸ್ಪಂದಿಸಲಾಗುವುದು. ಕಾರಟಗಿ ಮತ್ತು ಸಿರುಗುಪ್ಪ ತಾಲೂಕು ಸಂಪರ್ಕದ ನಂದಿಹಳ್ಳಿ ಬಳಿಯ ತುಂಗಭದ್ರ ನದಿಗೆ ಸೇತುವೆ ನಿರ್ಮಾಣದ ಪ್ರಸ್ತಾವನೆಯಿದ್ದು, ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಂ.ಮಂಜುನಾಥ ಮಾತನಾಡಿ, ಎಸಿಗೆ ಸಂಬಂಧಿಸಿದ ಹಲವು ಪ್ರಕರಣಗಳು ತ್ರಿವಳಿ ತಾಲೂಕಿನಲ್ಲಿ ಬಾಕಿಯಿದ್ದು, ಗಂಗಾವತಿಯಲ್ಲಿ ಆರಂಭಿಸಿದರೆ ವಕೀಲರು ಮತ್ತು ಕಕ್ಷಿದಾರರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಗಂಭೀರ ಪರಿಗಣಿಸಿ, ಕಾಲಮಿತಿಯೊಳಗೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ವಕೀಲರ ಸಂಘದಿಂದ ಸಚಿವ ಶಿವರಾಜ ತಂಗಡಗಿಯನ್ನು ಸನ್ಮಾನಿಸಲಾಯಿತು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಉಪಾಧ್ಯಕ್ಷ ಪರಸಪ್ಪ ನಾಯಕ್, ಹಿರಿಯ ವಕೀಲರಾದ ಎಂ.ಪಂಪನಗೌಡ, ಸೋಮನಾಥ್ ಪಟ್ಟಣಶೆಟ್ಟಿ, ಚಿಕ್ಕ ವೀರನಗೌಡ, ಶಿವಾರೆಡ್ಡಿ ನಾಯಕ್, ಹೊನ್ನೂರ್ ಸಾಬ್, ಎಸ್.ಎಂ.ಸಜ್ಜಿಹೊಲ, ತ್ರಿಲೋಚನ ಕೊಲ್ಕಾರ್, ಮಂಜುನಾಥ ತಾಳೂರು, ಶರಣಪ್ಪ ಮೆಣಸಿಗಿ, ಹನುಮೇಶ ಕುಂಬಾರ್, ಅಕ್ಕಮಹಾದೇವಿ, ಮಲ್ಲಮ್ಮ, ಸುಮಾ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net