

ಬಳ್ಳಾರಿ: ತುಂಗಭದ್ರಾ ಪುಷ್ಕರ ಹಿನ್ನೆಲೆಯಲ್ಲಿ ಟಿಬಿ ಡ್ಯಾಮ್‌ನಿಂದ ನದಿಗೆ ಶುಕ್ರವಾರ ಮೂರು ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ.
ನ.20ರಿಂದ ಡಿ.1ರವರೆಗೆ ತುಂಗಭದ್ರಾ ನದಿ ಪುಷ್ಕರ ನಡೆಯಲಿದೆ. ಪುಷ್ಕರ ವೇಳೆ ನದಿಯಲ್ಲಿ ಸ್ನಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ನದಿಗೆ ನೀರು ಬಿಡಲಾಗಿದೆ. 100.855 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 90.364 ಟಿಎಂಸಿ ಅಡಿ ನೀರು ಇದೆ. ಜಲಾಶಯಕ್ಕೆ ಸರಾಸರಿ 1153 ಕ್ಯೂಸೆಕ್ ಒಳಹರಿವಿದೆ.