ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಅಕ್ರಮ ನೀರಾವರಿ ತಡೆಗೆ ಬೆಂಗಳೂರಿನಲ್ಲಿ ಸೆ.11ರಂದು ಸಭೆ

CHAMARAS MALI PATIL
ಚಾಮರಸ ಪಾಟೀಲ್ ಬೆಟ್ಟದೂರು.
Published on

ಮಾನ್ವಿ: ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಅಕ್ರಮ ನೀರಾವರಿ ತಡೆಗಟ್ಟಲು ನಡೆಸಿದ ಹೋರಾಟದ ಹಿನ್ನಲೆಯಲ್ಲಿ ಸೆ.11 ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ಸಭೆ ಕರೆಯಲಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಗೌರಾವಾಧ್ಯಕ್ಷ ಚಾಮರಸ ಪಾಟೀಲ್ ಬೆಟ್ಟದೂರು ತಿಳಿಸಿದ್ದಾರೆ.

ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಕೊಪ್ಪಳ ಜಿಲ್ಲಾ ಉಸ್ಯುವಾರಿ ಸಚಿವ ಬಿ.ಸಿ.ಪಾಟೀಲ್ ಹಾಗೂ ರಾಯಚೂರು-ಕೊಪ್ಪಳ ಜಿಲ್ಲೆಯ ಸಂಸದರು, ಶಾಸಕರು, ಮಾಜಿ ಶಾಸಕರು, ರೈತ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಅಕ್ರಮ ನೀರಾವರಿ ತಡೆಗಟ್ಟಲು ಕುರಿತು ಈ ಹಿಂದೆ ಸಭೆ ಕರೆಯಲಾಗಿತ್ತು, ಕಾರಣಾಂತರಗಳಿಂದ ಸಭೆ ಮುಂದುಡಲಾಗಿತ್ತು. ಸೆ. 11 ರಂದು ಸಭೆ ನಿಗದಿಯಾಗಿದೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ರೈತ ಮುಖಂಡರನ್ನ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net