

ಮಸ್ಕಿ: ತುಂಗಭದ್ರಾ ಎಡದಂಡೆ ನಾಲೆಗೆ ಶುಕ್ರವಾರ ಬೆಳಗ್ಗೆ ಸ್ನಾನಕ್ಕೆ ತೆರಳಿದ್ದ ಪೌರ ಕಾರ್ಮಿಕ ಜಾರಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾರೆ.
ನಾಪತ್ತೆಯಾಗಿರುವ ಪೌರ ಕಾರ್ಮಿಕನನ್ನು ಜಂಬಯ್ಯ ರಾಯಚೂರು (45) ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ನಡೆದಿದ್ದ ಆನ್‌ಲೈನ್ ನೇಮಕ ಪ್ರಕ್ರಿಯೆಯಲ್ಲಿ ಪಟ್ಟಣದ ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಜಂಬಯ್ಯ ನೇಮಕಗೊಂಡಿದ್ದರು.
ರಾಯಚೂರಿನಿಂದ ಗುರುವಾರ ಸಂಜೆ ಮತಯಂತ್ರಗಳನ್ನು ತೆಗೆದುಕೊಂಡು ಬಂದು ಪಟ್ಟಣದ ದೇವನಾಂಪ್ರಿಯ ಕಾಲೇಜಿನ ರೂಮಿನಲ್ಲಿ ಇರಿಸಿದ್ದರು. ಶುಕ್ರವಾರ ಬೆಳಗ್ಗೆ ಸಹೋದ್ಯೋಗಿಯೊಂದಿಗೆ ಸ್ನಾನಕ್ಕಾಗಿ ಕಾಲುವೆಗೆ ತೆರಳಿದ್ದರು. ಸಹೋದ್ಯೋಗಿಯನ್ನು ಮತ್ತೊಬ್ಬ ಪೌರ ಕಾರ್ಮಿಕನ ರಕ್ಷಣೆ ಮಾಡಲು ಯತ್ನಿಸಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಲಿಂಗಸುಗೂರು ಹಾಗೂ ಸಿಂಧನೂರಿನಿಂದ ಆಗಮಿಸಿರುವ ಆಗ್ನಿ ಶಾಮಕ ತಂಡಗಳು ಹಾಗೂ ಪೌರ ಕಾರ್ಮಿಕರು ಕಾಲುವೆಯಲ್ಲಿ ಜಂಬಯ್ಯಗಾಗಿ ಶೋಧ ನಡೆಸಿದ್ದಾರೆ.