4 ದಿನವಾದರೂ ಸಿಗದ ಪುತ್ರನ ಮೃತದೇಹ; ತುಂಗಭದ್ರಾ ನದಿ ಎದುರು ಫೋಟೊ ಹಿಡಿದು ಕುಟುಂಬಸ್ಥರ ಆಕ್ರಂದನ

26-RNR-04
Published on

ರಾಣೆಬೆನ್ನೂರ: ಕಳೆದ 4 ದಿನದ ಹಿಂದೆ ತುಂಗಭದ್ರಾ ನದಿಯಲ್ಲಿ ಬಿದ್ದಿರುವ ಮಗ ಇನ್ನೂ ಪತ್ತೆಯಾಗದ ಕಾರಣ ಕುಟುಂಬಸ್ಥರು ಆತನ ಫೋಟೊ ಹಿಡಿದು ನದಿಪಾತ್ರದಲ್ಲಿ ಕಣ್ಣೀರು ಹಾಕುತ್ತಿದ್ದಾರೆ.
ತಾಲೂಕಿನ ಮಾಕನೂರ ಗ್ರಾಮದ ಮಂಜುನಾಥ ಆನಂದಿ ಎನ್ನುವ ವ್ಯಕ್ತಿ ತುಂಗಭದ್ರಾ ನದಿಯಲ್ಲಿ ಜಾರಿ ಬಿದ್ದು ತೇಲಿ ಹೋಗಿದ್ದರು. ಆದರೆ, ಘಟನೆ ನಡೆದು 4 ದಿನ ಕಳೆದರೂ ಈವರೆಗೂ ಮಂಜುನಾಥ ಪತ್ತೆಯಾಗಿಲ್ಲ. ಹೀಗಾಗಿ ಕಣ್ಣೀರು ಹಾಕುತ್ತಿರುವ ಕುಟುಂಬದವರು ಮಗನಿಗಾಗಿ ಫೋಟೊ ಹಿಡಿದು ನದಿಯ ದಡದಲ್ಲಿ ಕಣ್ಣೀರು ಹಾಕುತ್ತಿದ್ದಾರೆ.
ಪ್ರಯತ್ನಿಸಿದರೂ ಸಿಗದ ಮಂಜುನಾಥ…
ತುಂಗಭದ್ರಾ ನದಿ ಪಾತ್ರದಲ್ಲಿ ಹೆಚ್ಚಿನ ನೀರು ಹರಿಯುತ್ತಿರುವ ಕಾರಣ ಮಂಜುನಾಥ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಆತ ಬಿದ್ದ ದಿನದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿಲ್ಲ. ಎನ್‌ಡಿಆರ್‌ಎಫ್ ತಂಡ ಕೂಡ ಬೋಟ್ ಮೂಲಕ ಶೋಧ ಕಾರ್ಯ ಕೈಗೊಂಡಿದೆ. ಆದರೆ, ಮಂಜುನಾಥನ ಯಾವ ಸುಳಿವು ದೊರೆತಿಲ್ಲ.
ನದಿಯಲ್ಲಿರುವ ನೀರಿನ ಸೆಳೆತ ನೋಡಿದರೆ ಮಂಜುನಾಥ ಬಹಳ ದೂರ ತೇಲಿ ಹೋಗಿರಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ಆತನ ಕುಟುಂಬದವರು ಜಿಲ್ಲಾಡಳಿತ ಆದಷ್ಟು ಬೇಗ ಹೆಚ್ಚಿನ ಶೋಧ ಕಾರ್ಯ ನಡೆಸಿ ನಮ್ಮ ಮಗನನ್ನು ಹುಡುಕಿಕೊಡಿ ಎಂದು ಮಂಜುನಾಥನ ತಂದೆ ಬಸಪ್ಪ ಆನಂದಿ, ತಾಯಿ ರತ್ನಮ್ಮ ಆನಂದಿ ಹಾಗೂ ಸಹೋದರ ಸುರೇಶ ಒತ್ತಾಯ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net