ತುಂಗಭದ್ರಾ ಅಣೆಕಟ್ಟೆಗೆ ಹೆಚ್ಚಿದ ಒಳಹರಿವು; ಆರು ದಿನದಲ್ಲಿ ಎಂಟು ಟಿಎಂಸಿ ಅಡಿ ನೀರು

TB Dam Tungabhadra Dam Hosapete
Published on

ಬಳ್ಳಾರಿ: ತುಂಗಭದ್ರಾ ಅಣೆಕಟ್ಟೆಗೆ ಪ್ರಸಕ್ತ ವರ್ಷವೂ ಉತ್ತಮ ಒಳಹರಿವು ದಾಖಲಾಗುತ್ತಿದೆ. ಕಳೆದ ಆರು ದಿನಗಳಲ್ಲಿ ಎಂಟು ಟಿಎಂಸಿ ಅಡಿ ನೀರು ಹರಿದುಬಂದಿದೆ.ಶನಿವಾರ ಅಣೆಕಟ್ಟೆಯಲ್ಲಿ 18.247 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ಸಂದರ್ಭದಲ್ಲಿ 12932 ಕ್ಯೂಸೆಕ್ ಒಳಹರಿವು ಇದ್ದು 5.251 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಜೂ.29ರಿಂದ ಜು.6ರವರೆಗೆ ಅಣೆಕಟ್ಟೆಯಲ್ಲಿ 10 ಟಿಎಂಸಿ ಅಡಿ ನೀರಿತ್ತು. ಜು.7ರಿಂದ ಒಳಹರಿವಿನಲ್ಲಿ ನಿರಂತರ ಹೆಚ್ಚಳವಾಗುತ್ತಿದೆ. ಗುರುವಾರ 16211, ಶುಕ್ರವಾರ 26007 ಇದ್ದ ಒಳಹರಿವು ಶನಿವಾರ 34374 ಕ್ಯೂಸೆಕ್‌ಗೆ ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net