ಕಾರೇಹಳ್ಳಿ ಶ್ರೀರಂಗನಾಥಸ್ವಾಮಿ ದೇವಾಲಯ ಸಂಪೂರ್ಣ ಮುಳುಗಡೆ

Kaarehalli_web
Published on

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಬೋರನಕಣಿವೆ ಜಲಾಶಯದ ನೀರಿನ ಮಟ್ಟ ದಿನೇದಿನೇ ಹೆಚ್ಚಾಗುತ್ತಿದ್ದು ಹಿನ್ನೀರಿನಲ್ಲಿರುವ ಇತಿಹಾಸ ಪ್ರಸಿದ್ಧ ಕಾರೇಹಳ್ಳಿ ಶ್ರೀರಂಗನಾಥಸ್ವಾಮಿ ದೇವಾಲಯ ಸಂಪೂರ್ಣ ಮುಳುಗಡೆಯಾಗಿದೆ.

ಬೋರನಕಣಿವೆ ತುಂಬಿದಾಗ ದೇವಾಲಯ ಮುಳುಗುವುದು ಸಾಮಾನ್ಯವಾಗಿದ್ದು ದಶಕದ ಬಳಿಕ ದೇವಾಲಯ ಮುಳುಗುತ್ತಿರುವುದು ಸ್ಥಳೀಯರ ಕುತೂಹಲ ಹೆಚ್ಚಿಸಿದೆ ಹಾಗಾಗಿ, ಪ್ರತಿನಿತ್ಯ ಅಲ್ಲಿಗೆ ಬರುವ ಜನರ ಸಂಖ್ಯೆಯೂ ಹೆಚ್ಚಾಗಿದೆ.

ದೇವಾಲಯಕ್ಕೆ ನೀರು ಬರಲಾರಂಭಿಸಿದ ಹಿನ್ನೆಲೆಯಲ್ಲಿಯೇ ಆಗಸ್ಟ್ 28ರಂದೇ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಊರು ಒಳಗಡೆ ಇರುವ ದೇವಾಲಯದಲ್ಲಿ ನಿತ್ಯ ಪೂಜೆ ಆರಂಭಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net