ರೈತರಿಗೆ ತುಮುಲ್ ಹೊಸವರ್ಷದ ಕೊಡುಗೆ; ರೈತರಿಂದ ಖರೀದಿಸುವ ಹಾಲಿನ ದರ 1.50ರೂ. ಹೆಚ್ಚಳ

TUMUL (1)
Published on

ತುಮಕೂರು: ರಾಸುಗಳಲ್ಲಿ ಚರ್ಮಗಂಟು ರೋಗದಿಂದ ತತ್ತಿರಿಸಿರುವ ಜಿಲ್ಲೆಯ ಹಾಲು ಉತ್ಪಾದಕರ ನೆರವಿಗೆ ತುಮುಲ್ ಧಾವಿಸಿದ್ದು, ಹೊಸ ವರ್ಷದ ಕೊಡುಗೆಯಾಗಿ ರೈತರಿಂದ ಖರೀದಿಸುವ ಹಾಲಿನ ದರವನ್ನು 1.50ರೂ.ಹೆಚ್ಚಿಸಿದೆ.

ನಗರದ ಹೊರವಲಯದ ಮಲ್ಲಸಂದ್ರದ ಒಕ್ಕೂಟದ ಆಡಳಿತ ಕಚೇರಿಯಲ್ಲಿ ಶನಿವಾರ ನಡೆದ ಮಂಡಳಿ ಸಭೆಯಲ್ಲಿ ಹಾಲಿನ ದರ ಹೆಚ್ಚಳ ಮಾಡುವ ತೀರ್ಮಾನ ಕೈಗೊಳ್ಳಲಾಗಿದ್ದು 2023 ಜ.1ರಿಂದಲೇ ನೂತನ ದರ ಜಾರಿಗೆ ಬರಲಿದೆ.

ಪ್ರತಿ ಲೀಟರ್ ಹಾಲಿನ ದರ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರತಿ ಲೀಟರ್ ಹಾಲಿಗೆ 33.71ರೂ. ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿAದ ಹಾಲು ಉತ್ಪಾದಕರಿಗೆ ನೀಡುವ ಪ್ರತಿ ಲೀಟರ್ ಹಾಲಿನ ಪರಿಷ್ಕೃತ ಮೂಲ ಬೆಲೆ 32.78ರೂ. ನೀಡಲಾಗುತ್ತಿದೆ.

ಪ್ರಸ್ತುತ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರತಿ ಲೀಟರ್ ಹಾಲಿಗೆ 32.21ರೂ. ಹಾಗೂ ಹಾಲು ಉತ್ಪಾದಕರಿಗೆ 31.28ರೂ.ಲಭ್ಯವಾಗುತ್ತಿದೆ. ಜಿಲ್ಲೆಯ 1320 ಹಾಲು ಉತ್ಪಾದಕರ ಸಹಕಾರ ಸಂಘಗಳಿAದ ಪ್ರತಿದಿನ 7 ಲಕ್ಷ ಲೀ., ಹಾಲು ಶೇಖರಣೆ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net