ವೃದ್ದೆ ತಲೆಗೆ ಹೊಡೆದು ಮಾಂಗಲ್ಯ ಸರಳ ಕಸಿದು ಪರಾರಿ

Crime Logo
Published on

ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಹಿಂಡಮಾರನಹಳ್ಳಿ ಗ್ರಾಮದ ವೃದ್ದ ಮಹಿಳೆ ಪುಟ್ಟಮ್ಮಳ(75) ತಲೆಗೆ ಹೊಡೆದು ಕಳ್ಳರು ಕೊರಳಿನ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಶುಕ್ರವಾರ ಮಂಜಾನೆ ನಡೆದಿದೆ.

ಹಿಂಡಮಾರನಹಳ್ಳಿ ಗ್ರಾಮದ ಮಂಜೇಗೌಡರ ತಾಯಿ ಪುಟ್ಟಮ್ಮ ಮಂಜಾನೆ ಶೌಚಾಲಯಕ್ಕೆ ಹೋಗಲು ಮನೆಯಿಂದ ಹೊರ ಬಂದಿದ್ದಾಗ ಕಳ್ಳರು ವೃದ್ದೆಯ ತಲೆಗೆ ಹೊಡೆದು ಕೊರಳಲ್ಲಿ ಇದ್ದ ಲಕ್ಷಾಂತರ ರೂಪಾಯಿಗಳ ಮೌಲ್ಯದ 30 ಗ್ರಾಂ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದಾರೆ.

ಎಷ್ಟು ಹೊತ್ತಾದರೂ ಪುಟ್ಟಮ್ಮ ಮನೆಯೊಳಕ್ಕೆ ಬಾರದಿರುವಾಗ ಮನೆಯವರು ಹೊರ ಬಂದ ನೋಡಲಾಗಿ ಪುಟ್ಟಮ್ಮ ನೆಲಕ್ಕೆ ಬಿದ್ದಿದ್ದು ಮತ್ತು ತಲೆಯಲ್ಲಿ ಗಾಯವಾಗಿದ್ದ ಕಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net