ಮರೆಯೋದುಂಟೆ ಮೈಸೂರು ದೊರೆಯ..

Odayar_New
Published on

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕಿನ ಬಹುತೇಕರ ವಾಟ್ಸ್ ಅಪ್, ಫೇಸ್ ಬುಕ್ ಡಿಪಿಯಲ್ಲಿ ಮೈಸೂರು ಅರಸ ಶ್ರೀಚಾಮರಾಜೇಂದ್ರ ಒಡೆಯರ್ ಅವರ ಭಾವಚಿತ್ರವಿರುವುದು ವಿಶೇಷ ಎನ್ನಿಸಿದೆ.

ಕೆಆರ್‌ಎಸ್ ಅಣೇಕಟ್ಟು ನಿರ್ಮಾಣಕ್ಕೂ ಪೂರ್ವದಲ್ಲಿಯೇ 1898ರಲ್ಲಿ ನಿರ್ಮಾಣವಾದ ಬೋರನಕಣಿವೆ ತುಂಬುತ್ತಿರುವ ಈ ಸಂದರ್ಭದಲ್ಲಿ ಮೈಸೂರು ಅರಸರನ್ನು ಸ್ಮರಿಸುವ ಕಾರ್ಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜನರು ಮಾಡಲಾರಂಭಿಸಿದ್ದಾರೆ.

ಜಲಾಶಯ ನಿಮಾತೃ ಶ್ರೀಚಾಮರಾಜೇಂದ್ರ ಒಡೆಯರ್ ಅವರ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಾಟ್ಸ್ಆಪ್ ಸ್ಟೇಟಸ್‌ಗಳಲ್ಲಿ ಹಾಕಿಕೊಳ್ಳುವ ಮೂಲಕ ಸ್ಮರಣೆ ನಡೆದಿದೆ.

ಜಲಾಶಯಕ್ಕೆ ಬಾಗಿಣ ಅರ್ಪಣೆ ಕೂಡ ಮಹಾರಾಜರ ಕುಟುಂಬದಿಂದ ನಡೆಯಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net