ಹಾಲಿನ ಕಲಬೆರೆಕೆ ನೋವಿನ ವಿಷಯ, ಎಲ್ಲೆಡೆ ತಪಾಸಣೆಗೆ ಸೂಚಿಸಿದ್ದೇನೆ; ಸಹಕಾರಿ ಸಚಿವ ಕೆ.ಎನ್.ರಾಜಣ್ಣ

KN Rajanna
Published on

ತುಮಕೂರು: ಹಾಲಿನ ಕಲಬೆರೆಕೆ ವಿಷಯ ನನಗೆ ನನಗೆ ಬಹಳ ತೀವ್ರವಾದ ನೋವು ತಂದಿದೆ, ನಂದಿನಿ ಹಾಲು ಹೊರತಾಗಿ ಬೇರೆ ಸಂಸ್ಥೆಯ ಹಾಲು ಎಲ್ಲವೂ ಸ್ಲೋ ಪಾಯಿಸನ್ ಎನ್ನಿಸಿವೆ ಈ ಬಗ್ಗೆ ಎಚ್ಚರಿಕೆ ವಹಿಸಲು ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಸಿಂಥಟಿಕ್ ಹಾಲು ಎಷ್ಟು ದಿನ ಇಟ್ಟರೂ ಕೆಡುವುದಿಲ್ಲ, ಏನೂ ಆಗುವುದಿಲ್ಲ. ಕಲಬೆರೆಕೆ ಕುರಿತು ಎಲ್ಲೆಡೆಯೂ ತಪಾಸಣೆ ನಡೆಸಬೇಕು, ಗುಣಮಟ್ಟದ ಪರೀಕ್ಷೆ ಮಾಡಬೇಕು, ಕಲಬೆರಕೆ ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲುಸೂಚಿಸಿದ್ದೇನೆ ಎಂದರು.

ಹಾಲು ಉತ್ಪಾದಕ ರೈತರಿಗೆ ಲೀಟರ್ ಹಾಲಿಗೆ 3 ರೂ. ಹೆಚ್ಚಳ ಮಾಡಲಾಗಿದೆ, ಇದರಿಂದ ಹಾಲಿನ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆಯಿದೆ ಹಾಗಾಗಿ, ತುಪ್ಪ ವೂ ಹೆಚ್ಚಾಗಬಹುದು, ತುಪ್ಪಾ ಹೆಚ್ಚಾದರೆ, ತಿರುಪತಿಗೆ ಬೇಕಾದರೂ ಕೊಡಬಹುದು, ಇಲ್ಲ ಅಂದರೆ ಎಲ್ಲಿಂದ ಕೊಡೋದು ಎಂದರು.

ಕ್ಷೀರಭಾಗ್ಯ ಯೋಜನೆಯಲ್ಲಿ ಉತ್ತರ ಕರ್ನಾಟಕ ದಲ್ಲಿ ಹಾಲಿನ ಪುಡಿ ಪೂರೈಕೆ ಆಗುತ್ತಿಲ್ಲ, ಗುಲ್ಬರ್ಗಾ ಜಿಲ್ಲೆಯಲ್ಲಿ ಕ್ಷೀರ ಭಾಗ್ಯ ನಮ್ಮ ನಿರೀಕ್ಷಿಯಂತೆ ಯಶಸ್ವಿಯಾಗಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net