ಎಡಿಯೂರು ಕ್ಷೇತ್ರದಲ್ಲಿ 64.78 ಲಕ್ಷ ರೂ. ಸಂಗ್ರಹ

17 kunigal 2
Published on

ಕುಣಿಗಲ್ : ತಾಲೂಕಿನ ಪ್ರಸಿದ್ದ ಎಡೆಯೂರು ಶ್ರೀ ಸಿದ್ದಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಮೂರು ತಿಂಗಳ ನಂತರ ದೇವಾಲಯದ ಆಡಳಿತ ಮಂಡಲಿ ಹುಂಡಿ ತೆರೆಯಲಾಗಿದ್ದು. ಹುಂಡಿಯಲ್ಲಿ ಒಟ್ಟು 64,78,000 ರೂ ಸಂಗ್ರಹವಾಗಿದೆ.

ದೇವಾಲಯದ ಅವರಣದಲ್ಲಿ ಶ್ರೀ ಕ್ಷೇತ್ರದ ಕಾರ್ಯನಿರ್ವಾಹಣಾಧಿಕಾರಿ ಡಿ. ನಾಗರಾಜು, ಅಧೀಕ್ಷಕ ಎಂ.ಎಲ್. ಮಂಜುನಾಥ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ವರ್ಗದವರು, ಅಮೃತೂರು ಪೊಲೀಸರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net