

ತುಮಕೂರು: ಯುವ ಪೀಳಿಗೆ ರಾಸಾಯನಿಕ ವಿಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವುದರ ಮೂಲಕ ಮಾನವ ಜನಾಂಗಕ್ಕೆ ಉತ್ತಮ ಪರಿಸರ ಸ್ನೇಹಿ ರಾಸಾಯನಿಕ ವಿಜ್ಞಾನವನ್ನು ಪರಿಚಯಿಸಿ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ರಸಾಯನಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಬುಧವಾರ ಆಯೋಜಿಸಿದ್ದ ‘ರಾಸಾಯನಿಕ ವಿಜ್ಞಾನ ಸಂಶೋಧನೆಯಲ್ಲಿ ಹೊಸ ಪ್ರವೃತ್ತಿಗಳು (ಎನ್‌ಸಿಇಟಿಸಿಎಸ್‌ಆರ್-2023)’ ಕುರಿತು ಒಂದು ದಿನದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ರಸಾಯನಶಾಸ್ತçವೂ ವಿಜ್ಞಾನದ ಕೇಂದ್ರ ವಿಷಯವಾಗಿ ಪರಿಸರ ಮತ್ತು ಮಾನವನ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನ ಆಸ್ತಿತ್ವವನ್ನು ಹೊಂದಿದೆ. ಪ್ರಸ್ತುತ ದಿನಗಳಲ್ಲಿ ರಾಸಾಯನಿಕ ವಿಜ್ಞಾನದಲ್ಲಿ ಆವಿಷ್ಕಾರಗಳು ತುಂಬಾ ಗಣನೀಯವಾಗಿ ಬೆಳೆಯುತ್ತಿದೆ. ರಾಸಾಯನಿಕ ವಸ್ತುಗಳ ಪರಿಣಾಮದ ಅರಿವಿರಬೇಕು. ರಾಸಾಯನಿಕ ವಿಜ್ಞಾನ ಆರೋಗ್ಯ ಕ್ಷೇತ್ರದಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ ಎಂದರು
ಪ್ರಾಧ್ಯಾಪಕ ಡಾ. ಜೆ. ಮಂಜಣ್ಣ, ಡಾ. ಪ್ರಕಾಶ್ ಎಂ.ಶೇಟ್, ಡಾ. ಕೊಂಕಲ್ಲು ಹನುಮೇಗೌಡ, ಡಾ. ದಿನೇಶ್ ರಂಗಪ್ಪ, ಡಾ.ಟಿ. ಎನ್.ರಮೇಶ್ , ಡಾ. ಜಿ.ಆರ್.ವಿಜಯ್‌ಕುಮಾರ್ ಭಾಗವಹಿಸಿದ್ದರು.