ಸಾವರ್ಕರ್ ಅಧ್ಯಯನ ಪೀಠಕ್ಕೆ ವಿರೋಧ: ನಿರ್ಧಾರ ವಾಪಸ್ ಪಡೆಯದಿದ್ದರೆ ಧರಣಿ ಎಚ್ಚರಿಕೆ

VV_Savarkar_Web
Published on

ತುಮಕೂರು: ತುಮಕೂರು ವಿವಿಯಲ್ಲಿ ಆರಂಭಿಸಲು ಉದ್ದೇಶಿಸಿರುವ ಸಾವರ್ಕರ್ ಅಧ್ಯಯನ ಪೀಠಕ್ಕೆ ವಿರೋಧ ತೀವ್ರವಾಗಿದ್ದು ತಿರ್ಮಾನ ವಾಪಸ್ ಪಡೆಯದಿದ್ದರೆ ಚಳವಳಿ ತೀವ್ರಗೊಳಿಸುವುದಾಗಿ ವಿವಿಧ ಸಂಘಟನೆಗಳು ತಿಳಿಸಿವೆ.

ತುಮಕೂರು ವಿವಿ ಕುಲಪತಿ ಕಚೇರಿ ಮುಂಭಾಗ ಇಂದು ಭಾರತೀಯ ಶರಣ ಸೇನಾ, ಎಸ್‌ಎಫ್‌ಐ ಹಾಘೂ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.

ಭಾರತೀಯ ಶರಣ ಸೇನಾ ರಾಜ್ಯ ಸಂಚಾಲಕ ರವಿಕುಮಾರ್ ರಾಯಸಂದ್ರ ಮಾತನಾಡಿ, ಕೋಮುವಾದಿ ಬಿಜೆಪಿ ಸರ್ಕಾರ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನ ಪಕ್ಷದ ಯಾವುದೇ ಸದಸ್ಯರು ಇಲ್ಲದಿರುವುದನ್ನು ಮನಗಂಡು ಜನರ ಮಧ್ಯೆ ಕೋಮುವಾದ ಹುಟ್ಟು ಹಾಕಲು ಇಂತಹ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.


ಸಿಂಡಿಕೇಟ್ ಮಾಜಿ ಸದಸ್ಯ ಕೊಟ್ಟ ಶಂಕರ್, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಈ. ಶಿವಣ್ಣ, ಜಿಲ್ಲಾ ಪ್ರಗತಿಪರ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಮೇಶ್, ಬಿವಿಎಸ್ ಮುಖಂಡ ರಂಗಧಾಮಯ್ಯ, ಭಾನುಪ್ರಕಾಶ್, ಎನ್‌ಎಸ್‌ಯುಐ ಅಮಾನುಲ್ಲಾ, ಎಸ್‌ಎಫ್‌ಐ ನಗರಾಧ್ಯಕ್ಷ ಶಶಿವರ್ಧನ್, ನಗರ ಕಾರ್ಯದರ್ಶಿ ಅಜಿತ್, ಮಂಜುನಾಥ್, ವಾಲ್ಮಿಕಿ ಸೇನೆಯ ಕರಿಯ ನಿಶಾದ್, ಭಾರತೀಯ ಶರಣ ಸೇನೆಯ ಜಿಲ್ಲಾಧ್ಯಕ್ಷ ರಮೇಶ್, ದಲಿತ್ ವಿದ್ಯಾರ್ಥಿ ಸೇನೆ ಅಜಿತ್ ಮತ್ತಿತರರು ಇದ್ದರು.

ತುಮಕೂರು ವಿವಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆ ಮೂಲಕ ದೇಶದ ಆಸಯಗಳ ವಿರುದ್ಧವಾಗಿ ನಡೆದುಕೊಂಡಿದೆ, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿ ದಾನ ಮಾಡಿದ ಲಕ್ಷಾಂತರ ಜನರಿದ್ದಾರೆ. ಅವರನ್ನೆಲ್ಲಾ ಬಿಟ್ಟು ಬ್ರಿಟೀಷರಿಗೆ ಕ್ಷಮಾಪಣಾ ಪತ್ರ ಬರೆದು ಜೈಲಿನಿಂದ ಬಿಡುಗಡೆಯಾದ ಸಾವರ್ಕರ್ ದೇಶಭಕ್ತ ಎಂದು ಬಿಂಬಿಸಲು ನೋಡಲಾಗುತ್ತಿದೆ. ಕೂಡಲೇ ವಿವಿ ಆದೇಶ ವಾಪಸ್ ಪಡೆಯದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು.
ರಾಯಸಂದ್ರ ರವಿಕುಮಾರ್
ರಾಜ್ಯ ಸಂಚಾಲಕ, ಭಾರತೀಯ ಶರಣ ಸೇನಾ ಕರ್ನಾಟಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net