

ಬೆಂಗಳೂರು
ತುಮಕೂರು ವಿಶ್ವವಿದ್ಯಾಲಯದ ನಿಯೋಜಿತ ಕುಲಸಚಿವೆ ಹಾಗೂ ಕೆಎಎಸ್ ಅಧಿಕಾರಿ ನಯಿದಾ ಜಮ್ ಜಮ್ ಅವರ ಬಗ್ಗೆ ಹಗರುವಾಗಿ ನಾಲಿಗೆಹರಿಬಿಟ್ಟಿರುವ ಹಾಲಿ ಕುಲಸಚಿವ ಪ್ರೊ.ಶಿವಚಿತ್ತಪ್ಪ ಅವರನ್ನು ಅಮಾನತು ಮಾಡುವಂತೆ ಕೆಎಎಸ್ ಅಧಿಕಾರಿಗಳ ಸಂಘ ಒತ್ತಾಯಿಸಿದೆ.
ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಮಹಿಳಾ ಅಧಿಕಾರಿ ಬಂದರೆ ವಿಶ್ವವಿದ್ಯಾಲಯದಲ್ಲಿ ಪಹಣಿ ಕೊಡಬಹುದು ಅಷ್ಟೇ ಎಂದು ಶಿವಚಿತ್ತಪ್ಪ ಲೇವಡಿ ಮಾಡಿದ್ದರು.
ಶಿವಚಿತ್ತಪ್ಪ ಅವರ ಮಾತುಗಳನ್ನು ಖಂಡಿಸಿರುವ ಸಂಘದ ಅಧ್ಯಕ್ಷ ಡಾ.ರವಿ ಎಂ ತಿರ್ಲಾಪೂರ ಹಾಗೂ ಕಾರ್ಯದರ್ಶಿ ಡಾ.ಬಿ.ಆರ್.ಹರೀಶ್‌ನಾಯ್ಕ ಅವರು, ಶಿವಚಿತ್ತಪ್ಪ ಅವರ ಮಾತು ಮಹಿಳಾ ಅಧಿಕಾರಿಯ ಘನತೆಗೆ ಕುಂದು ತಂದಿದೆ ಎಂದು ಟೀಕಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ದೂರು ಸಲ್ಲಿಸಿರುವ ಸಂಘ, ಕೂಡಲೇ ಅಮಾನತು ಮಾಡುವಂತೆ ಒತ್ತಾಯಿಸಿದೆ.