

ತುಮಕೂರು: ತುಮಕೂರು ಹಾಲು ಒಕ್ಕೂಟದ ಮಧುಗಿರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಬಿ.ನಾಗೇಶಬಾಬು ಆಯ್ಕೆಯನ್ನು ಹೈಕೋರ್ಟ್ ಅಸಿಂಧು ಎಂದು ಘೋಷಿಸಿದ್ದು, ಮುಂದಿನ 15 ದಿನದೊಳಗೆ ಮರು ಮತ ಎಣಿಕೆ ನಡೆಸಿ ಲಿತಾಂಶ ಘೋಷಿಸುವಂತೆ ತುಮಕೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
ತುಮುಲ್ ನೀಡಿದ್ದ ನೋಟೀಸ್ಗೆ ಉತ್ತರ ನೀಡದ ಹಿನ್ನೆಲೆಯಲ್ಲಿ ಕೊಂಡವಾಡಿ ಚಂದ್ರಶೇಖರ್ ಡಿಸಿ ಕೋರ್ಟ್ ಮೊರೆ ಹೋಗಿದ್ದರು. ಡಿಸಿ ನ್ಯಾಯಾಲಯದಲ್ಲಿ ಇವರ ಮತದಾನವನ್ನು ಅನರ್ಹ ಎಂದು ಘೋಷಿಸಿದ್ದರು. ಡಿಸಿ ಕೋರ್ಟ್ ಆದೇಶ ವಿರುದ್ದ ನಾಗೇಶ್ಬಾಬು ಹೈಕೋರ್ಟ್ ನ ಮೊರೆ ಹೋಗಬೇಕಿತ್ತು. ಆದರೂ ನೇರವಾಗಿ ಚುನಾವಣೆ ಸ್ಪರ್ಧೆ ಮಾಡಿದ್ದರು.
2021ರಲ್ಲಿ ತುಮುಲ್ ಬೈಲಾದಲ್ಲಿ ತಿದ್ದುಪಡಿ ಮಾಡಲಾಗಿದ್ದು ಬಿ.ನಾಗೇಶ್ಬಾಬು ನಿಯಮವನ್ನು ಪಾಲಿಸಿಲ್ಲ, ತುಮುಲ್ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ 150 ಲೀಟರ್ ನಂತೆ 300 ಲೀಟರ್ ಹಾಲು 270 ದಿನಗಳ ಕಾಲ ಡೈರಿಗೆ ಹಾಕಿರಬೇಕು. ಅವರು ಮಾತ್ರ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರು ಎಂಬುದು ನಿಯಮ ಪಾಲನೆಯಾಗಿಲ್ಲ ಎನ್ನಲಾಗಿದೆ.
15 ದಿನದೊಳಗೆ ಮರು ಮತ ಎಣಿಕೆ ನಡೆಸಿ ನೂತನ ನಿರ್ದೇಶಕರನ್ನು ಆಯ್ಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಕೊಂಡವಾಡಿ ಚಂದ್ರಶೇಖರ್ ಹಾಗೂ ನಾಗೇಶ್ಬಾಬು ನಡುವೆ ಲಿತಾಂಶ ಬದಲಾಗುವ ಸಾಧ್ಯತೆಯೂ ಇದೆ.
ಕಳೆದ ವರ್ಷ ತುಮುಲ್ ಒಕ್ಕೂಟಕ್ಕೆ ನಡೆದಿದ್ದ ಚುನಾವಣೆಯಲ್ಲಿ ಬಂದ್ರೇಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದಿಂದ ಬಿ.ನಾಗೇಶ್ಬಾಬು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮತ್ತು ಕೊಂಡವಾಡಿ ಹಾಲು ಉತ್ಪಾದಕ ಸಹಕಾರ ಸಂಘದಿಂದ ಕೊಂಡವಾಡಿ ಚಂದ್ರಶೇಖರ್ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು.
ಕೊಂಡವಾಡಿ ಚಂದ್ರಶೇಖರ್ 53 ಮತ ಗಳಿಸಿದ್ದರು, 62 ಮತ ಗಳಿಸಿದ್ದ ಕಾಂಗ್ರೆಸ್ ಬೆಂಬಲಿತ ಬಿ.ನಾಗೇಶ್ಬಾಬು 9 ಮತಗಳ ಅಂತರದಿಂದ ಜಯಗಳಿಸಿದ್ದರು. ನ್ಯಾಯಾಲಯದ ಮೊರೆ ಹೋಗಿಯೇ ಮತದಾನದ ಡೆಲಿಗೇಟ್ಸ್ ತಂದು ತುಮುಲ್ ನಿರ್ದೇಶಕರ ಸ್ಥಾನಕ್ಕೆ ನಾಗೇಶ್ಬಾಬು ಸ್ಪರ್ಧಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
13ಡಿ 2ಎ ಅಡಿಯಲ್ಲಿ 9 ಜನರಿಗೆ ಮತದಾನದ ಹಕ್ಕುನಿಡಲಾಗಿತ್ತು. ಈ ಮತದಾನ ಹಕ್ಕನ್ನು ಅಸಿಂಧು ಎಂಬುದಾಗಿ ನ್ಯಾಯಾಲಯ ವಜಾ ಮಾಡಿರುವ ಹಿನ್ನೆಲೆಯಲ್ಲಿ ಲಿತಾಂಶ ಬದಲಾಗುವ ಸಾಧ್ಯತೆ ದಟ್ಟವಾಗಿದೆ.