ಬಟ್ಟೆ ತೊಳಿಯಲು ನೀರಿಗಿಳಿದಿದ್ದ ಅತ್ತೆ, ಸೊಸೆ ಸಾವು

Died 12 March 20
Published on

ತುಮಕೂರು: ಬಟ್ಟೆ ತೊಳೆಯಲು ತೆರಳಿದ್ದ ಅತ್ತೆ, ಸೊಸೆ, ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ತಿಪಟೂರು ಸಮೀಪದ ಭೈರನಾಯಕನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.

ಮಂಜುನಾಥನಗರ ನಿವಾಸಿಗಳಾದ ಅನಸೂಯಮ್ಮ (55) ಮತ್ತು ಈಕೆಯ ಸೊಸೆ ಚಂದ್ರಿಕ(25) ಮೃತರು. ಬಟ್ಟೆ ಜಾಲಾಡುವ ಸಂದರ್ಭ ಸೊಸೆ ಚಂದ್ರಿಕ ಕಾಲು ಜಾರಿ ನೀರಿಗೆ ಬಿದ್ದಿದ್ದು, ಈಕೆಯನ್ನು ರಕ್ಷಿಸಲು ಹೋದ ಅತ್ತೆ ಅನಸೂಯಮ್ಮ ಕೂಡಾ ನೀರಿನಲ್ಲಿ ಮುಳುಗಿದ್ದಾರೆ.

ಚಂದ್ರಿಕಾ ಪತಿ ರಘು ಕೂಲಿ ಕೆಲಸಗಾರನಾಗಿದ್ದು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net