ಮಾಜಿ ಸಂಸದ ಎಸ್‌ಪಿಎಂ, ಶಶಿಕುಮಾರ್ ಬಿಜೆಪಿ ಸೇರ್ಪಡೆ

SPM_CM_TODAY
Published on

ತುಮಕೂರು: ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ನಿರೀಕ್ಷೆಯಂತೆಯೇ ಬಿಜೆಪಿ ಸೇರ್ಪಡೆಯಾಗಿದ್ದು, ಕುಣಿಗಲ್ ಕ್ಷೇತ್ರದಿಂದ ರಾಜ್ಯರಾಜಕಾರಣಕ್ಕೆ ವಾಪಸಾಗುವುದು ಖಚಿತವಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ಹಾಗೂ ಪ್ರಮುಖ ಸಚಿವರ ಉಪಸ್ಥಿತಿಯಲ್ಲಿ ಎಸ್‌ಪಿಎಂ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕಮಲ ಪಾಳಯಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.

ಎಸ್‌ಪಿಎಂ ಅವರೊಂದಿಗೆ ಚಿತ್ರದುರ್ಗ ಮಾಜಿ ಸಂಸದ, ನಟ ಶಶಿಕುಮಾರ್ ಕೂಡ ಬಿಜೆಪಿ ಸೇರ್ಪಡೆಯಾಗಿರುವುದು ತುಮಕೂರು, ಚಿತ್ರದುರ್ಗ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬಲ ಬಂದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net