

ತುಮಕೂರು: ನಗರದ ಆಲದ ಮರದ ಪಾರ್ಕ್ ನಲ್ಲಿ ಜಮಾಯಿಸಿದ್ದ ವಿವಿಧ ಶಾಲೆಗಳ ನೂರಾರು ಮಕ್ಕಳು ಗಣೇಶೋತ್ಸವ ಸಂಭ್ರಮದಲ್ಲಿ ಸಮಾಜದಕ್ಕೆ ಒಳ್ಳೆಯ ಸಂದೇಶವೊಂದನ್ನು ನೀಡಿದರು.
ವರ್ಣೋದಯ ಆರ್ಟ್ ಗ್ರೂಪ್ ಟ್ರಸ್ಟ್, ಪ್ರೆಸ್‌ಕ್ಲಬ್ ತುಮಕೂರು, ತುಮಕೂರು ಮಹಾನಗರ ಪಾಲಿಕೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ನಡೆದ ಪರಿಸರ ಸ್ನೇಹಿ ಗಣೇಶಮೂರ್ತಿ ರಚನಾ ಕಾರ್ಯಾಗಾರದಲ್ಲಿ ಸುಂದರ ಗಣೇಶಮೂರ್ತಿಗಳು ಪುಟಾಣಿಗಳ ಕೈಚಳಕದಲ್ಲಿ ನಿರ್ಮಾಣವಾದವು.
ಬೃಹತ್ ಆಲದ ಮರದ ನೆರಳಿನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಾರ್ಗದರ್ಶಕರ ಸಹಾಯ ಪಡೆದು ಗಣೇಶಮೂರ್ತಿಗಳನ್ನು ನಿರ್ಮಿಸಿದ ಮಕ್ಕಳು ಭವಿಷ್ಯದಲ್ಲಿಯೂ ಪರಿಸರ ಸ್ನೇಹಿ ಗಣೇಶನನ್ನು ಮಾತ್ರ ಪ್ರತಿಷ್ಠಾಪಿಸುವುದಾಗಿ ಸಂಕಲ್ಪತೊಟ್ಟರು.
ಮಕ್ಕಳ ಸಂಭ್ರಮದಲ್ಲಿ ಪೋಷಕರು ಜತೆಯಾಗಿದ್ದರು. ಸಮಾರಂಭದಲ್ಲಿ ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ವರ್ಣೋದಯ ಆರ್ಟ್ ಗ್ರೂಪ್ ಟ್ರಸ್ಟ್ ಅಧ್ಯಕ್ಷ ಕಿಶೋರ್ ಕುಮಾರ್, ಪ್ರೆಸ್‌ಕ್ಲಬ್ ಅಧ್ಯಕ್ಷ ಶಶಿಧರ್ ಎಸ್.ದೋಣಿಹಕ್ಲು, ಉಪಾಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಸತೀಶ್, ಆರ್.ಸಂಗಮೇಶ್, ತೇಜಸ್ವಿನಿ ಮತ್ತಿತರರು ಇದ್ದರು.