

ಅರಸೀಕೆರೆ: ಪಾವಗಡ ತಾಲೂಕು ನಿಡಗಲ್ ಹೋಬಳಿ ಮಂಗಳವಾಡ ಕ್ಲಸ್ಟರ್ ವ್ಯಾಪ್ತಿಯ ಕಲಿಕಾ ಹಬ್ಬ ಅರಸೀಕೆರೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಇತ್ತೀಚೆಗೆ ಜರುಗಿತು.
ವಿವಿಧ ಶಾಲೆಗಳಿಂದ ಆಗಮಿಸಿದ್ದ ತಂಡಗಳಿಂದ ವೀರಗಾಸೆ ನೃತ್ಯ, ಹುಲಿ ವೇಷ ಕುಣಿತ, ಡಂಬೆಲ್ಸ್, ಲೇಜಿಮ್ಸ್, ಫ್ಲವರ್ ಶೋ, ಕುಂಭಗಳ ಮೆರವಣಿಗೆ ಆಕರ್ಷಿಸಿತು.
ನಂತರ ಸಂತರು ಹಾಗೂ ರಾಷ್ಟ್ರದ ನಾಯಕರ ವೇಷ ತೊಟ್ಟಿದ್ದ ಮಕ್ಕಳನ್ನು ಎತ್ತಿನ ಗಾಡಿಯಲ್ಲಿ ಗ್ರಾಮದ ಪ್ರಮುಖ ರಸ್ತೆಗಳ್ಲಿ ತಾಳವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು.
ಸಿಆರ್ಪಿ ಮಂಜುನಾಥ್ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿ ಹೆಚ್ಚಿಸಲು ಸರ್ಕಾರ ಕಲಿಕಾ ಹಬ್ಬ ಆಯೋಜಿಸಿದೆ, ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಕಲಿಕೆಯ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಾರೆ ಎಂದರು.
ಇಸಿಒ ರಂಗನಾಥ್, ಮುಖ್ಯಶಿಕ್ಷಕ ಡಿ.ಎನ್.ಗೋವಿಂದಪ್ಪ, ಎಸ್ಡಿಎಂಸಿ ಅಧ್ಯಕ್ಷ ಗುರುರಾಜ್, ಬಿಆರ್ಪಿ ರಂಗಸ್ವಾಮಿ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಕೆ.ಎಚ್.ಅಂಜಿನಪ್ಪ, ಎಸ್ಡಿಎಂಸಿ ಅಧ್ಯಕ್ಷ ಸತೀಶ್, ಮುಖಂಡರಾದ ಕುಮಾರಪ್ಪ, ಎಚ್ಎಂಎಚ್ ರಾಯಪ್ಪ ರವರು, ವಾಗೀಶ್ಆರಾಧ್ಯ, ವೀರೇಂದ್ರಪ್ಪ, ಪಿ.ದೊಡ್ಡಣ್ಣ ಮತ್ತಿತರರು ಇದ್ದರು.