

ತುಮಕೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಮತಕ್ಷೇತ್ರಗಳಲ್ಲಿ ರಾಜಕಾರಣಿಗಳು ತರಹೇವಾರಿ ಅವತಾರಗಳಲ್ಲಿ ಕಾಣಿಸಿಕೊಳ್ಳುವುದು ಹೆಚ್ಚಾಗುತ್ತಿದೆ.
ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಕೂಡ ಕೊರಟಗೆರೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಎತ್ತಿನಗಾಡಿ ಓಡಿಸಿ ಜನರನ್ನು ರಂಜಿಸಿದ್ದಾರೆ.
ಕಾಲೇಜು ದಿನಗಳಲ್ಲಿ ಉತ್ತಮ ಅಥ್ಲೆಟ್ ಕೂಡ ಆಗಿದ್ದ ಡಾ.ಜಿ.ಪರಮೇಶ್ವರ್ ಎತ್ತಿನಗಾಡಿ ಓಡಿಸಿದ್ದಕ್ಕೆ ನೆರೆದಿದ್ದ ಕ್ಷೇತ್ರದ ಜನರೂ ಖುಷಿಪಟ್ಟಿದ್ದಾರೆ.