ತುಮಕೂರಲ್ಲಿ ಕಾಂಪೌಂಡ್​ಗೆ ಮಾರುತಿ ವ್ಯಾನ್ ಡಿಕ್ಕಿ: ಇಬ್ಬರ ಸಾವು, ಓರ್ವನ ಸ್ಥಿತಿ ಗಂಭೀರ

accident
Published on

ತುಮಕೂರು: ಹೊರಪೇಟೆಯಲ್ಲಿರುವ ಬೆಸ್ಕಾಂ ಸೆಕ್ಯೂರಿಟಿ ಕಾಂಪೌಂಡ್​ಗೆ ಮಾರುತಿ ವ್ಯಾನ್​ ಡಿಕ್ಕಿಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ತುಮಕೂರಿನ ದೀಪು(36) ಮತ್ತು ಚಾಲಕ ಖಾಸಿಂ(25) ಮೃತ ದುರ್ದೈವಿಗಳು. ಬುಧವಾರ ತಡರಾತ್ರಿ ತುಮಕೂರು ನಗರದ ಮಂಡಿಪೇಟೆ ಕಡೆಯಿಂದ ಬರುತ್ತಿದ್ದ ಮಾರುತಿ ವ್ಯಾನ್, ಚಾಲಕನ ನಿಯಂತ್ರಣತಪ್ಪಿ ಕಾಂಪೌಂಡ್​ಗೆ ಡಿಕ್ಕಿಯಾಗಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರನ್ನೂ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಿಸದೆ ಇಬ್ಬರೂ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬ 22 ವರ್ಷದ ಮಂಜುನಾಥ್​ ಗಂಭೀರ ಗಾಯಗೊಂಡಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net