

ಮಧುಗಿರಿ: ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ದೇವೇಗೌಡರ ಬಗ್ಗೆ ಕೀಳಾಗಿ ಮಾತನಾಡಿ ಅವರ ಸಾವು ಬಯಸುವುದು ಅತ್ಯಂತ ದುಖಃದ ವಿಚಾರ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೆಸರೇಳದೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹರಿಹಾಯ್ದರು.
ಪಟ್ಟಣದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಮಧುಗಿರಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ದೇವೇಗೌಡರಿಗೆ ಗೌರವ ಕೊಡುತ್ತಾರೆ ಆದರೆ, ಈ ಭಾಗದ ಹಿರಿಯ ಮುಖಂಡ ನಾಲಗೆ ಹರಿಯಬಿಡುವುದು ನೋವು ತಂದಿದೆ ಎಂದರು.
2019ರ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಲ್ಲಿ ದೇವೇಗೌಡರ ಸೋಲು ನಮಗೆ ಬಹಳಷ್ಟು ನೋವು ತಂದಿದೆ ಎಂದರು.
90ವರ್ಷದ ಹಿರಿ ವಯಸ್ಸಿನಲ್ಲೂ ದೇವೇಗೌಡರು ಕನ್ನಡ ನೆಲ, ಜಲ ಭಾಷೆ ಉಳಿವಿಗೆ ರೈತರ, ದಲಿತರ, ಬಡವರ ಏಳಿಗೆಗೆ ಶ್ರಮಿಸುತ್ತಿದ್ದಾರೆ ಆದರೆ, ತುಮಕೂರಿನಲ್ಲಿ ಜನರು ಸೋಲಿಸಿದರು ಎಂದರು.