ಯುವಜನತೆ ಐತಿಹಾಸಿಕ ಮಾಹಿತಿ ಅರಿಯಲಿ

Kampli Student visit to fort
ಕಂಪ್ಲಿ ಕೋಟೆಯ ಮಹಾದ್ವಾರವನ್ನು ತುಮಕೂರಿನ ಕಾನೂನು ವಿದ್ಯಾರ್ಥಿಗಳು ವೀಕ್ಷಿಸಿದರು. ಜಿಲ್ಲಾ ಯುವ ಅಧಿಕಾರಿ ಮೊಂಟು ಪತ್ತಾರ್, ಪ್ರಮುಖರಾದ ರಾಮರಾವ್ ಕೆ.ಬಿರಾದಾರ್, ಡಾ.ಎಚ್.ಸಿ.ರಾಘವೇಂದ್ರ, ಅಮರೇಶ ಇತರರಿದ್ದರು.
Published on

ಕಂಪ್ಲಿ: ತುಮಕೂರಿನ 27 ಜನ ಕಾನೂನು ಪದವಿ ವಿದ್ಯಾರ್ಥಿಗಳು ಶುಕ್ರವಾರ ಪಟ್ಟಣದ ಕೋಟೆ ಮಹಾದ್ವಾರ ವೀಕ್ಷಿಸಿ ಇತಿಹಾಸದ ಮಾಹಿತಿ ಪಡೆದರು.

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ವಿದ್ಯಾರ್ಥಿ ಕಲ್ಯಾಣ ಘಟಕ ಹಾಗೂ ಮೈ ಭಾರತ ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಅಂತರ್ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮದಡಿ ವಿದ್ಯಾರ್ಥಿಗಳು ಪಟ್ಟಣಕ್ಕೆ ಭೇಟಿ ನೀಡಿದ್ದರು.

ಬಳ್ಳಾರಿಯ ಭಾರತ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮೊಂಟು ಪತ್ತಾರ್ ಮಾತನಾಡಿ, ಯುವಜನತೆ ಸಾಹಿತ್ಯಕ, ಸಾಂಸ್ಕೃತಿಕ, ಐತಿಹಾಸಿಕ ಮಾಹಿತಿ ಅರಿಯಲು ಮುಂದಾಗಬೇಕು. ಈ ಹಿನ್ನೆಲೆಯಲ್ಲಿ ಅಂತರ್ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net