

ತುಮಕೂರು: ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಹಾಗೂ ಪುರಸಭೆ ಜೆಡಿಎಸ್ ಸದಸ್ಯ ಶ್ರೀನಿವಾಸ್ ಪರಸ್ಪರ ಬೀದಿಯಲ್ಲಿಯೇ ಬೈದಾಡಿಕೊಂಡಿರುವ ಘಟನೆ ಇಂದು ನಡೆದಿದೆ.
18ನೇ ವಾರ್ಡ್ ಹೌಸಿಂಗ್‌ಬೋರ್ಡ್ನಲ್ಲಿ 65 ಲಕ್ಷ ರೂ. ವೆಚ್ಚದ ರಸ್ತೆ, ಚರಂಡಿ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕ ರಂಗನಾಥ್ ವಿರುದ್ಧ ಶ್ರೀನಿವಾಸ್ ಹರಿಹಾಯ್ದಿದ್ದು ಕಾರ್ಯಕ್ರಮಕ್ಕೆ ತಡೆಯೊಡ್ಡಿದ್ದರು.
ವಾರ್ಡ್ ಸದಸ್ಯನಾದ ನನ್ನ ಸಲಹೆಯನ್ನು ಪಡೆಯದೇ ಪುರಸಭೆ ಅಧಿಕಾರಿ ಕಾಂಗ್ರೆಸ್ ಮುಖಂಡ ಹೇಳಿದ ರಸ್ತೆಯಲ್ಲಿ ಕಾಮಗಾರಿ ಮಾಡಿಸುತ್ತಿದ್ದಾರೆ ಎಂದು ಶ್ರೀನಿವಾಸ್ ಹರಿಹಾಯ್ದರು. ಶಾಸಕರ ಅನುದಾನ ಎಲ್ಲಿಗೇ ಬೇಕಾದರೂ ನೀಡುತ್ತೇನೆ, ನೀಉ ಹೆಳಿದ ರಸ್ತೆಯನ್ನೂ ಮಾಡಿಸೋಣ ಎಂದು ಡಾ.ಎಚ್.ಡಿ.ರಂಗನಾಥ್ ತಿರುಗೇಟು ನೀಡಿದರು.
ಜನಪ್ರತಿನಿಧಿಗಳಿಬ್ಬರು ಕ್ಷುಲ್ಲಕ ಕಾರಣಕ್ಕೆ ಪಟ್ಟಣದಲ್ಲಿ ಬಹಿರಂಗವಾಗಿ ಕಿತ್ತಾಡಿಕೊಂಡಿರುವುದು ಪಟ್ಟಣದಲ್ಲಿ ಜನರಿಗೆ ಮನರಂಜನೆ ಒದಗಿಸಿದೆ.