ಶಾಸಕರ ಸಮ್ಮುಖದಲ್ಲಿ ಮದಲೂರು ಕೆರೆಗೆ ಕೋಣ ಬಲಿ?

KOna
Published on

ತುಮಕೂರು: ಶಿರಾ ತಾಲೂಕು ಮದಲೂರು ಕೆರೆ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಸ್ಥಳೀಯರೆಲ್ಲಾ ಈ ಹಿಂದಿನ ಸಂಪ್ರದಾಯದAತೆ ಕೋಣ ಬಲಿ ಕೊಟ್ಟಿದ್ದಾರೆ ಎನ್ನಲಾಗಿದೆ.


ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಸಮ್ಮುಖದಲ್ಲಿಯೇ ಕೋಣನ ಬಲಿಯಾಗಿದೆ ಎನ್ನಲಾಗಿದ್ದು, ಬಲಿಕೊಟ್ಟ ಕೋಣದ ತಲೆಯನ್ನು ಕೋಡಿ ನೀರಿನಲ್ಲಿ ಹರಿಯಬಿಟ್ಟಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಕೋಣ ಕಡಿದು ನೀರಿಗೆ ಬಿಟ್ಟಿರುವ ವಿಷಯದ ಬಗ್ಗೆ ಪರ, ವಿರೋಧದ ಚರ್ಚೆಗಳು ಆರಂಭವಾಗಿದ್ದು ಕಾನೂನು ಕ್ರಮಕ್ಕೂ ಒತ್ತಾಯ ಕೇಳಿಬಂದಿದ್ದು ತಾಲೂಕು ಆಡಳಿತ ಮಾತ್ರ ಈವರೆಗೂ ಯಾವುದೇ ಪ್ರಕರಣ ದಾಖಲಿಸಿಲ್ಲ.


ಸ್ಥಳೀಯ ಶಾಸಕರ ಸಮ್ಮುಖದಲ್ಲಿಯೇ ಕೋಣವನ್ನು ಬಲಿಕೊಟ್ಟಿರುವ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಕ್ರಮಕೈಗೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net