ಮೂವರು ಅನಾಥ ಯುವತಿಯರು ನೇಣಿಗೆ ಶರಣು; ಮೃತಪಟ್ಟ ಒಂಬತ್ತು ದಿನದ ನಂತರ ಪ್ರಕರಣ ಬೆಳಕಿಗೆ

19HULIYAR1
Published on

ತುಮಕೂರು: ಅನಾಥರಾಗಿದ್ದ ಮೂವರು ಸಹೋದರಿಯರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಒಂಬತ್ತು ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಬರಕನಹಾಲ್‌ತಾಂಡ್ಯದ ರಂಜಿತಾ(24), ಬಿಂಧು (21) ಚಂದನಾ(18) ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರಾಗಿದ್ದು ಗುರುವಾರ ಸಂಜೆ ಪ್ರಕರಣ ಬೆಳಕಿಗೆ ಬಂದಿದೆ.

ದಶಕದ ಹಿಂದೆಯೇ ತಂದೆ, ತಾಯಿ ಕಳೆದುಕೊಂಡು ಅಜ್ಜಿಯ ಆಶ್ರಯದಲ್ಲಿದ್ದ ಮೂವರು ಯುವತಿಯರಿಗೆ ಅಜ್ಜಿಯೂ ಸಾವನ್ನಪ್ಪಿದ್ದು ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮಾಡಿತ್ತು ಎನ್ನಲಾಗಿದೆ, ಇಬ್ಬರು ಕಿಬ್ಬನಹಳ್ಳಿಕ್ರಾಸ್ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿಕೊಂಡು ಕುಟುಂಬ ಸಾಕುತ್ತಿದ್ದರು.

ಬಾಲದೇವರಹಟ್ಟಿಯಿಂದ ಬರಕನಹಾಲ್ ತಾಂಡ್ಯಕ್ಕೆ ಹೋಗುವ ದಾರಿಯ ರಸ್ತೆ ಬದಿಯಲ್ಲಿರುವ ಒಂಟಿ ಮನೆಯಲ್ಲಿ ಒಂಬತ್ತು ದಿನದ ಹಿಂದೆಯೇ ನೇಣಿಗೆ ಶರಣಾಗಿದ್ದು ಮೃತದೇಹ ಕೊಳೆತು ವಾಸನೆ ಬಂದಾಗ ಸ್ಥಳೀಯರು ಗಮನಿಸಿ ಮನೆಯ ಹೆಂಚು ತೆಗೆದು ಗಮನಿಸಿದಾಗ ಘಟನೆ ತಿಳಿದಿದೆ.

ಎಎಸ್‌ಪಿ ಸಿದ್ಧಾರ್ಥಗೋಯಲ್, ಸಿಪಿಐ ನಿರ್ಮಾಲ, ಪಿಎಸ್‌ಐ ಮೂರ್ತಿ ಸ್ಥಳಕ್ಕೆ ಭೇಟಿ ತನಿಖೆ ಕೈಗೊಂಡಿದ್ದಾರೆ. ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net