ಹುಳಿಯಾರು ಪೊಲೀಸ್‌ ಠಾಣೆ ಮಹಿಳಾ ಪೇದೆ ಕೊಲೆ?

16TMK_Crime_Sudha1
Published on

ತುಮಕೂರು: ಹುಳಿಯಾರು ಪೊಲೀಸ್ ಠಾಣೆ ಮಹಿಳಾ ಪೇದೆ ಎಸ್.ಸುಧಾ ಕಾಣೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.
ಸಹೋದರಿ ಪೇದೆಯನ್ನು ಕೊಲೆಗೈದಿದ್ದೇನೆ ಎಂದು ಡೆತ್‌ನೋಟ್ ಬರೆದಿಟ್ಟು ಆಕೆಯ ಸಹೋದರ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಕೆರೆಸೂರಗೊಂಡನಹಳ್ಳಿಯ ಮಂಜುನಾಥ್(26) ಶಿವಮೊಗ್ಗ ನಗರದ ಖಾಸಗಿ ಹೋಟೆಲ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು ಪ್ರಕರಣ ಆತಂಕ ಹೆಚ್ಚಿಸಿದೆ.
ಕಾಣೆಯಾಗಿರುವ ಪೊಲೀಸ್ ಪೇದೆ ಸುಧಾ ಹಾಗೂ ಆತ್ಮಹತ್ಯೆಗೆ ಶರಣಾಗಿರುವ ಮಂಜುನಾಥ್ ಸಹೋದರ ಸಂಬಂಧಿಗಳಾಗಿದ್ದು ಕಾಣೆಯಾದ ಸೆ.13ರಂದು ಇಬ್ಬರು ಚಿಕ್ಕನಾಯಕನಹಳ್ಳಿಯಲ್ಲಿ ಜತೆಯಾಗಿ ಕಾರಿನಲ್ಲಿ ಹೊರಟಿದ್ದರು. ಸಂಜೆ 8.40ರಿಂದ ಇಬ್ಬರ ಪೋನ್ ಸಂಪರ್ಕ ಕಡಿತವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net