ಬಿಸಿಯೂಟ ಮಾಡುತ್ತಿದ್ದ ಮಕ್ಕಳ ಮೇಲೆ ಉರುಳಿಬಿದ್ದ ಕಂಬಗಳು; ಮೂವರು ಮಕ್ಕಳಿಗೆ ಗಾಯ

191222
Published on

ತುಮಕೂರು: ಮಧ್ಯಾಹ್ನ ಬಿಸಿಯೂಟ ಮಾಡುತ್ತಿದ್ದ ಮಕ್ಕಳ ಮೇಲೆ ಶಿಥಲವಾಗಿದ್ದ ಕಂಬಗಳು ಕುಸಿದುಬಿದ್ದು ಮಕ್ಕಳು ಗಾಯಗೊಂಡಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕು ಗೋಡೆಕೆರೆ ಸರ್ಕಾರಿ ಶಾಲೆಯಲ್ಲಿ ಸಂಭವಿಸಿದೆ.

ಕೂದಲೆಳೆ ಅಂತರದಲ್ಲಿ ಶಾಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು 4ನೇ ತರಗತಿ ವಿದ್ಯಾರ್ಥಿ ಉಲ್ಲಾಸ್‌ಗೆ ಗಂಭೀರ ಗಾಯವಾಗಿದೆ, ಒಂದನೇ ತರಗತಿಯ ಯಶಸ್ ಹಾಗೂ 4ನೇ ತರಗತಿಯ ಕುಶಾಲ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಾಲಾ ಕಟ್ಟಡ ಶಿಥಲವಾಗಿದ್ದರೂ ಅದನ್ನು ಕೆಡವಲು ಮೀನಾಮೇಷ ಎಣಿಸುತ್ತಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿ ಬಗ್ಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net