

ತುಮಕೂರು: ಸರ್ಕಾರ ಶಾಲೆಗಳ ಖರ್ಚು ನಿರ್ವಹಣೆಗೆ ವಿದ್ಯಾರ್ಥಿಗಳ ಪೋಷಕರಿಂದ ದೇಣಿಗೆ ಪಡೆಯಲು ಸರ್ಕಾರ ಯಾವುದೇ ಆದೇಶ ನೀಡಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದರು.
ತುರುವೇರೆಕೆಯಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಶುಲ್ಕದ ಬಗ್ಗೆ ಸರ್ಕಾರ ಯಾವುದೇ ಆದೇಶ ನೀಡಿಲ್ಲ, ಆಯಾ ಶಾಲಾಭಿವೃದ್ಧಿ ಸಮಿತಿಯಲ್ಲಿ ಮಕ್ಕಳ ಪೋಷಕರೇ ಇದ್ದು ಅವರೇ ಭಲವಂತವಾಗಿ ಪಡೆಯುವಂತಿಲ್ಲ, ದಾನಿಗಳೇ ಬಯಸಿದರೆ ನೀಡಬಹುದಷ್ಟೇ ಎಂದರು.
ದಾನಿಗಳು ನೀಡಿದ ದೇಣಿಗೆ ಅಥವಾ ಕೊಡುಗೆಯನ್ನು ಶಾಲಾ ಅಭಿವೃದ್ದಿಗೆ ಬಳಸಬಹುದು ಇದರಲ್ಲಿ ಸರ್ಕಾರದ ಆದೇಶ ಇಲ್ಲ ಎಂದರು.