

ತುಮಕೂರು: ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿ ಮಾಜಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಪುನರಾಯ್ಕೆಯಾಗಿದ್ದಾರೆ. 7ನೇ ಬಾರಿ ಡಿಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿಯುವಲ್ಲಿ ರಾಜಣ್ಣ ಯಶಸ್ವಿಯಾಗಿದ್ದಾರೆ.
ನಗರದ ಡಿಸಿಸಿ ಬ್ಯಾಂಕ್ ಮುಖ್ಯ ಕಚೇರಿ ಯಲ್ಲಿ ಗುರುವಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಯೆ ಸಭೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ರಾಜಣ್ಣ , ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಜೆ.ರಾಜಣ್ಣ ಮಾತ್ರ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆ ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಘೋಷಿಸಿದರು. ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ರಾಜಣ್ಣ ಬಣ 14 ಕ್ಕೆ 14 ಸ್ಥಾನ ಗೆದ್ದಿತ್ತು.
ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ನನ್ನನ್ನು ಆರನೇ ಬಾರಿಗೆ ಅವಿರೋಧವಾಗಿ ತುಮಕೂರು ಡಿ.ಸಿ.ಸಿ ಬ್ಯಾಂಕ್‌ನ ಅಧ್ಯಕ್ಷ ನನ್ನಾಗಿ ಹಾಗೂ ಉಪಾಧ್ಯಕ್ಷರಾಗಿ ಜಿ.ಜೆ.ರಾಜಣ್ಣ ರವರನ್ನು ಆರಿಸಿದ್ದಕ್ಕಾಗಿ ಧನ್ಯವಾದಗಳು. ಈ ಗೆಲುವಿಗೆ ಕಾರಣರಾದ ಬ್ಯಾಂಕಿನ ನಿರ್ದೇಶಕರಿಗೂ ಹಾಗೂ ಎಲ್ಲಾ ಸಹಕಾರಿಗಳಿಗೂ ಕೆ.ಎನ್.ರಾಜಣ್ಣ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಗೆಲುವಿನ ಸ್ಪೂರ್ತಿ ನಮ್ಮೆಲ್ಲರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಬಳಕೆಯಾಗಲಿ ಎಂದು ನಾನು ಈ ಮೂಲಕ ಆಶಿಸುವೆ. ಎಲ್ಲಾ ಸಮುದಾಯಗಳ ಯುವಜನರು ಸಹಕಾರ ಕ್ಷೇತ್ರಕ್ಕೆ ಬಂದು, ಇನ್ನಷ್ಟು ಹೊಸ ಚಿಂತನೆಗಳು ಬರುವ ಹಾಗೆ ದುಡಿಯುವ ಸಂಕಲ್ಪವನ್ನು ನಾವೆಲ್ಲ ಮಾಡಬೇಕಿದೆ. ಆಗಮಾತ್ರವೇ ಈ ಸಹಕಾರ ಕ್ಷೇತ್ರ ಉಳಿಯಲು ಸಾಧ್ಯ ಇನ್ನಷ್ಟು ಹೊಸ ಕನಸುಗಳೊಂದಿಗೆ ಮುಂದಿವರೆಯೋಣ. ನಮ್ಮ ಬದ್ದತೆಯ ಕೆಲಸ ಕಾರ್ಯಗಳು ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿರಲಿ ಎಂದು ಆಶಿಸಿದರು. ನನ್ನನ್ನು ಮತ್ತೆ ಮತ್ತೆ ಮೇಲೇತ್ತುತಿರುವ ಸಹಕಾರ ಕ್ಷೇತ್ರವನ್ನು ನಾನು ಎಂದಿಗೂ ಮರೆಯುವುದಿಲ್ಲ. ಎಲ್ಲರಿಗೂ ಮತ್ತೊಮ್ಮೆ ಮಗದೊಮ್ಮೆ ತುಂಬು ಹೃದಯದ ಧನ್ಯವಾದಗಳು ಎಂದು ರಾಜಣ್ಣ ಹೇಳಿದ್ದಾರೆ.