

ತುಮಕೂರು: ತಿಪಟೂರಿನ ಸಿ.ಬಿ.ಶಶಿಧರ್ ನೇತೃತ್ವದ ಜನಸ್ಪಂದನಾ ಟ್ರಸ್ಟ್ ಹಾಗೂ ಬೆಂಗಳೂರಿನ ಬಿ.ಕಲ್ಚರ್ ಸಂಸ್ಥೆ ಒಡಗೂಡಿ ಅಂತರಾಷ್ಟಿçÃಯ ಮಟ್ಟದ 30 ಕಲಾವಿದರು ರಚಿಸಿರುವ ಭಾರತ್ ಜೋಡೋಕ್ಕೆ ಸಂಬAಧಿಸಿದ ಕಲಾಕೃತಿಗಳನ್ನು ಪಾದಯಾತ್ರೆಯಲ್ಲಿ ಪ್ರದರ್ಶನವಾಗಲಿವೆ.
ತಿಪಟೂರಿನಲ್ಲಿ ಪಾದಯಾತ್ರೆ ಸಾಗುವಾಗ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ಕಲಾಕೃತಿಗಳ ಪ್ರದರ್ಶನ ಉದ್ಘಾಟಿಸಲಿದ್ದಾರೆ. ತುಮಕೂರು ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ಈ ಕಲಾಕೃತಿ ಪ್ರದರ್ಶನಕ್ಕೆ ಚಿಂತನೆ ನಡೆಸಲಾಗಿದೆ ಎಂದು ಟೂಡಾ ಶಶಿಧರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆಪಿಸಿಸಿ ವಕ್ತಾರ ಡಾ.ಸಿ.ಎಸ್.ದ್ವಾರಕನಾಥ್, ಜಿಪಂ ಮಾಜಿ ಸದಸ್ಯ ತ್ರಿಯಂಬಕ, ಲೇಖಕ ಎಸ್.ಗಂಗಾಧರಯ್ಯ , ಭೂಮಿ ಕಲಾತಂಡದ ಸತೀಶ್, ಬೆಲೆ ಕಾವಲು ಸಮಿತಿ ಶ್ರೀಕಾಂತ್‌ಕೆಳಹಟ್ಟಿ, ಮುಖಂಡರಾದ ಪುನೀತ್, ಶಂಕರ್ ಸುದ್ದಿಗೋಷ್ಠಿಯಲ್ಲಿದ್ದರು.
ಒಡೆದು ಮನಸ್ಸುಗಳನ್ನು ಜೋಡಿಸುವ ಯಾತ್ರೆ!
ಇದು ಕಾಂಗ್ರೆಸ್ ಯಾತ್ರೆ ಮಾತ್ರವಲ್ಲ, ಒಡೆದ ಮನಸ್ಸುಗಳನ್ನು ಜೋಡಿಸುವ ಯಾತ್ರೆ, ಇಡೀ ನಾಗರಿಕ ಸಮಾಜ ಪಾಲ್ಗೊಳ್ಳಬೇಕು. ಬಿಜೆಪಿ ಮನಸ್ಡಿತಿ ಹಾಗೂ ಕೋಮುವಾದಿ ಮನಸ್ಥಿತಿ ವಿರೋಧಿಸುವ ಎಲ್ಲರೂ ಭಾಗವಹಿಸಬೇಕಾದ ಪಾದಯಾತ್ರೆ. ಎಲ್ಲಾ ಪ್ರಗತಿ ಪರ ಮನಸ್ಸುಗಳು ಬೆಂಬಲಿಸಬೇಕು ಹಾಗೂ ಭಾರತ್ ಜೋಡೋ ಆಶಯ ಎಲ್ಲರಿಗೂ ತಿಳಿಸಬೇಕು. ಪ್ರೀತಿ , ಭಾತೃತ್ವ ಹಂಚಿ ಎಲ್ಲರೂ ಒಟ್ಟಾಗಿರಬೇಕೆಂಬ ಯಾತ್ರೆ ಯಶಸ್ವಿಯಾಗಬೇಕು.
ಟೂಡಾ ಶಶಿಧರ್
ಜಿಲ್ಲಾ ಸಂಯೋಜಕ, ಕೆಪಿಸಿಸಿ ವಾರ್ ರೂಂ